Tuesday 30 May 2017

ಸಹಯಾನ ಸಾಹಿತ್ಯೋತ್ಸವ- 2017 Sahayana Sahithyotsava- ಈರಪ್ಪ ತಾಳದವರ್-Eerappa T...

ಸಹಯಾನ ಸಾಹಿತ್ಯೋತ್ಸವ- 2017 Sahayana Sahithyotsava- ಮಮತಾ ಯಾವಗಲ್ Mallamma Ya...

ಸಹಯಾನ ಸಾಹಿತ್ಯೋತ್ಸವ- 2017 Sahayana Sahithyotsava- ಮಾಧವಿ ಭಂಡಾರಿ-Madhavi Bh...

ಸಹಯಾನ ಸಾಹಿತ್ಯೋತ್ಸವ 2017 ಕವಿಗೋಷ್ಠಿ- ವಿದಗಯಾಧರ ಕಡತೋಕಾ VidhyAdhara kadatoka

ಸಹಯಾನ ಸಾಹಿತ್ಯೋತ್ಸವ 2017 ಕವಿಗೋಷ್ಠಿ- ಸಚಿನ್ ಅಂಕೋಲಾ-Sachin Ankola

ಸಹಯಾನ ಸಾಹಿತ್ಯೋತ್ಸವ 2017 ಕವಿಗೋಷ್ಠಿ- ರೇಣುಕಾ ರಮಾನಂದ- Renuka Ramanand 2

ಸಹಯಾನ ಸಾಹಿತ್ಯೋತ್ಸವ 2017 ಕವಿಗೋಷ್ಠಿ- ರೇಣುಕಾ ರಮಾನಂದ-Renuka Ramanand 1

ಸಹಯಾನ ಸಾಹಿತ್ಯೋತ್ಸವ 2017 ಕವಿಗೋಷ್ಠಿ- ವಿಜಯಕಾಂತ ಪಾಟೀಲ- Vijayakanta Patil 1

ಸಹಯಾನ ಸಾಹಿತ್ಯೋತ್ಸವ 2017 ಕವಿಗೋಷ್ಠಿ - ಮುಸ್ತಾಫ್ ಕೆ ಎಚ್-K H Musta

ಸಹಯಾನ ಸಾಹಿತ್ಯೋತ್ಸವ 2017 ಕವಿಗೋಷ್ಠಿ- ಮಮತಾ ಆರ್ -Mamata R

Monday 15 May 2017

ಸಾಂಸ್ಥಿಕ ಜಡತೆಗಳ ವಿರುದ್ಧ ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ-ಡಾ. ಶಿವರಾಮ ಪಡಿಕ್ಕಲ್


“ನಮ್ಮ ನಾಡು-ನುಡಿಗಳು ಇಂದು ಒಂದು ನಿರ್ಧಾರಾತ್ಮಕ ಕ್ಷಣದಲ್ಲಿ ನಿಂತಿವೆ. ಜಾಗತೀಕರಣ, ತೀವ್ರ ಬಂಡವಾಳಶಾಹಿ, ಮುಂದುವರಿದ ದೇಶಗಳ ಆರ್ಥಿಕ ಶೋಷಣೆ ಮತ್ತು ಸಾಂಸ್ಕøತಿಕ ರಾಜಕಾರಣಗಳ ಕವಲು ಹಾದಿಯಲ್ಲಿ ನಿಂತಿರುವ ನಾವು ಈ ತನಕ ನಿರೂಪಿಸಿಕೊಂಡು ಬಂದಿರುವ ರಾಷ್ಟ್ರ ಮತ್ತು ಆಧುನಿಕತೆಗಳ ಕಲ್ಪನೆಗಳನ್ನು ವಿಶ್ಲೇಷಿಸಿಕೊಂಡು ನಮಗೆ ಬೇಕಾದ ಆಧುನಿಕತೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಆ ಆಧುನಿಕತೆಯು ಜನಪರ, ಪರಿಸರ ಸ್ನೇಹಿ, ಯುದ್ಧ ವಿರೋಧಿ, ವರ್ಗ, ಜಾತಿ, ಲಿಂಗ ತಾರತಮ್ಯ ವಿರೋಧಿ, ವಿವಿಧ ಜನ, ಜನಾಂಗ, ಗುಂಪು, ಪಂಗಡಗಳ ಸಾಮಾಜಿಕ ಅಸ್ಮಿತೆಯನ್ನೂ ಸಾಂಸ್ಕøತಿಕ ಅನನ್ಯತೆಯನ್ನೂ ಕಾಪಾಡುವ ಆಧುನಿಕತೆಯಾಗಿರಬೇಕು. ವಿಭಿನ್ನತೆಗಳನ್ನೂ, ವ್ಯತ್ಯಾಸಗಳನ್ನೂ ಮಾನ್ಯ ಮಾಡುತ್ತಲೇ ನಮ್ಮ ರಾಷ್ಟ್ರೀಯ ಮತ್ತು ಕನ್ನಡದ ಅಸ್ಮಿತೆಗಳನ್ನು, ಅಂದರೆ ನಾಡು ನುಡಿಗಳನ್ನು ನಾವು ಕಟ್ಟಬೇಕಾಗಿದೆ. ಇಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವ ಬರಹಗಳು ಮತ್ತು ಅವುಗಳನ್ನು ಬರೆಯುವ ಲೇಖಕರು ಈ ಹಿನ್ನೆಲೆಯಿಂದ ಬರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಎಲ್ಲ ಬರಹಗಳೂ ಮೂಲಭೂತವಾಗಿ ರಾಜಕೀಯವಾಗಿವೆ. ಸ್ವಹಿತಾಸಕ್ತಿ, ಪಟ್ಟಭದ್ರ ಹಿತಾಸಕ್ತಿ, ಅಧಿಕಾರ ರಾಜಕಾರಣ, ಸಾಂಸ್ಥಿಕವಾಗಿ ಜಡಗೊಂಡ ಧಾರ್ಮಿಕ, ರಾಜಕೀಯ ಮತ್ತು ಮೂಲಭೂತವಾದಿ ವಿಚಾರಧಾರೆಗಳ ವಿರುದ್ಧ ಸಾಹಿತ್ಯ ಯಾವಾಗಲೂ ದಂಗೆ ಏಳುತ್ತದೆ ಮತ್ತು ದಂಗೆ ಎದ್ದಿದೆ. ಈ ಅರ್ಥದಲ್ಲಿ ಸಾಂಸ್ಥಿಕ ಜಡತೆಗಳ ವಿರುದ್ಧ ವಿದ್ರೋಹ ಸಾಹಿತ್ಯದ ಒಡಲಲ್ಲೇ ಇದೆ” ಎಂದು ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಶಿವರಾಮ ಪಡಿಕ್ಕಲ್ ಹೇಳಿದರು.
ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದಲ್ಲಿ ಸಹಯಾನ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ) ವು ಹೊನ್ನಾವರದ ಕೆರೆಕೋಣದಲ್ಲಿ ಹಮ್ಮಿಕೊಂಡ ‘ನಾಡು-ನುಡಿಯ ಪುನರ್ ನಿರೂಪಣೆ: ಹೊಸತಲೆಮಾರು’ ಎನ್ನುವ ವಿಷಯದ ಕುರಿತ ಸಹಯಾನ ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂದುವರಿದು, ಅವರು “ಇಂದು ನಾವಿರುವುದು ಯುರೋಪಿನ ಜ್ಞಾನ ಪರ್ವದ ಕಾಲದಲ್ಲಿ ವಿಕಾಸಗೊಂಡ ಆಧುನಿಕತೆÀ ಅಥವಾ ವಸಾಹತುಶಾಹಿಯ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ರೂಪುತಳೆದ ರಾಷ್ಟ್ರ ಕೇಂದ್ರಿತ ಆಧುನಿಕತೆಯ ಯುಗದಲ್ಲಿ ಇಲ್ಲ. ನಾವಿರುವುದು ಜಾಗತಿಕ ಮತ್ತು ಭೌಗೋಳಿಕ ಆಧುನಿಕತೆಯ ಅಲ್ಲ ಆಧುನಿಕತೆಗಳ ಸಂದರ್ಭದಲ್ಲಿ. ಇಲ್ಲಿ ಒಂದು ಯಜಮಾನ ಕಥನವಿಲ್ಲ, ಏಕರೂಪೀ ಅಸ್ಮಿತೆಯಿಲ್ಲ, ಐಕ್ಯಕೊಂಡ ವ್ಯಕ್ತಿತ್ವ ಅಥವಾ ವಕ್ತøತ್ವವಿಲ್ಲ. ಇದು ಅನೇಕ ಅಸ್ಮಿತೆಗಳ, ಅನೇಕ ವ್ಯಕ್ತಿತ್ವಗಳ, ವಕ್ತøತ್ವಗಳ ಮತ್ತು ಆಧುನಿಕತೆಗಳ ಕಾಲ. ಯಜಮಾನ ಸಂಕಥನಗಳನ್ನು ಪ್ರಶ್ನಿಸಿ, ಅವುಗಳಿಗೆ ಸೆಡ್ಡು ಹೊಡೆದು ಸವಾಲೊಡ್ಡಿ ವಿಭಿನ್ನ ರೀತಿಯ ಸಂಕಥನಗಳ ಸಾಧ್ಯತೆಯನ್ನು ಆಗು ಮಾಡುವ ಬರಹಗಳನ್ನು ಇಂದಿನ ಲೇಖಕರು ಬರೆಯುತ್ತಿದ್ದಾರೆ. ನಾಡು ಮತ್ತು ನುಡಿಗಳು ಸರ್ವ ಜನಾಂಗದ ಸುಂದರ ತೋಟ ಮತ್ತು ನೂರು ಮರ ನೂರು ಸ್ವರ ಎನ್ನುವ ಮಾತನ್ನು ಹಿಂದೆಂದಿಗಿಂತಲೂ ತೀವ್ರವಾಗಿ ಇಂದಿನ ಲೇಖಕರು ನಿರೂಪಿಸುತ್ತಿದ್ದಾರೆ.
        ಇಂದು ನಾವು ಬಹುಮುಖ ಚಿಂತನೆ, ಬಹುಮುಖಿ ವಿಚಾರಧಾರೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ವಿವಿಧ ಸಾಂಸ್ಕøತಿಕ ಅಸ್ಮಿತೆಗಳಿಗೆ ಮನ್ನಣೆ ಸಾಮಾಜಿಕ ಅನ್ಯಾಯ ಅಸಮಾನತೆಗಳ ವಿರೋಧ, ಸ್ತ್ರೀ ಸ್ವಾತಂತ್ರ್ಯ, ಪರಿಸರ ಪ್ರೇಮಿ ಬಹಿರಂಗÀದ ಆರ್ಥಿಕ ಪ್ರಗತಿಯ ಜೊತೆಗೇ ಅಂತರಂಗದ ಪರಿಶುದ್ಧತೆಯನ್ನು ಕಾಪಾಡುವ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಾಡು-ನುಡಿಗಳ ಕನಸಿನಿಂದ ಕೂಡಿದ ಸಂಕಥನಗಳನ್ನು ಯಜಮಾನ ಸಂಸ್ಕøತಿ ಮತ್ತು ಅಧಿಕಾರಗಳು ಮುಂದಿಡುವ ಏಕರೂಪೀ ಸಂಕಥನಗಳಿಗೆ ಎದುರು ಸಂಕಥನಗಳನ್ನು ಪ್ರತಿ ಸಂಕಥನಗಳನ್ನು ನಿರೂಪಿಸಬೇಕಾಗಿದೆ.” ಎಂದರು.
ಸಾಹಿತ್ಯೋತ್ಸವವನ್ನು ಉದ್ಘಾಟಸಿದ ಕತೆಗಾರ ಕಾ. ತ. ಚಿಕ್ಕಣ್ಣ ಮಾತನಾಡಿದ ಸಮಾಜದ ಮೌಲ್ಯಗಳನ್ನು ಕಟ್ಟುವ ಕೆಲಸ ಆಗಬೇಕು. ನಾಡು ರಾಷ್ಟ್ರ ಧರ್ಮ ಭಾಷೆ ಇವು ಪರಸ್ಪರರನ್ನು ಬೆಸೆಯಲು ಹುಟ್ಟಿಕೊಂಡವು. ಆದರೆ ಈಗ ಅವುಗಳನ್ನು ಬಳಸಿ ಒಡೆಯುವ ಕೆಲಸ ನಡೆಯುತ್ತಿದೆ. ಬದಲಾಗಿ ಬೆಸೆಯುವ ಯಾನವೂ ಯುವಜನರಿಂದ ನಡೆಯಬೇಕಾಗಿದೆ. ಬಾವುಟ ಭಾಷಣಗಳೆಲ್ಲ ಬಾಹ್ಯ ಜಗತ್ತು. ಜೀವನದ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಕೆಲಸ ಅಂತರಂಗದಲ್ಲಿ ಆಗಬೇಕಾಗಿದೆ ಎಂದರು.
ಅತಿಥಿಯಾಗಿ ಪಾಲ್ಗೊಂಡ ಸಮುದಾಯ ಕರ್ನಾಟಕದ ಅಧ್ಯಕ್ಷರಾದ ಎ. ಅಚ್ಯುತ ಮಾತನಾಡಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಕೃಷಿಕರು ಮತ್ತು ಕೃಷಿ ರಂಗ ಸಂಕಟದಲ್ಲಿದೆ. ಇದನ್ನು ಪರಿಹರಿಸುವ ಬದಲು ಏಕಮುಖೀ ಸಂಸ್ಕøತಿಯನ್ನು ಹೇರುವ ಮೂಲಕ ರಾಜಕೀಯ ತಲ್ಲಣವ್ನುಂಟುಮಾಡಲಾಗುತ್ತಿದೆ. ಇದರಿಂದ ಹೊರಬರಲು ಯುವಕರು ಸಹಯಾನದ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಯಾನದ ಕಾರ್ಯದರ್ಶಿ ಡಾ. ವಿಠ್ಠಲ ಭಂಡಾರಿ ಈ ಸಲದ ಸಹಯಾನ ಸಾಹಿತ್ಯೋತ್ಸವದಲ್ಲಿ ನಮ್ಮ ಕಾಲದ ಸಾಹಿತ್ಯ ರಾಷ್ಟ್ರ ಭಾಷೆ ಹಾಘೂ ಸಾಂಸ್ಕøತಿಕ ವೈವಿಧ್ಯಗಳ ಪ್ರಶ್ನೆಗಳನ್ನು ಹೊಸತಲೆಮಾರು ಹೇಗೆ ನಿರ್ವಹಿಸುತ್ತಿದೆ ಎಂಬುದನ್ನೇ ಮುಖ್ಯ ಪ್ರಶ್ನೆಯಾಗಿ ಚರ್ಚಿಸಬೇಕೆಂದಿದ್ದೇವೆ. ಇಂದಿನ ಸಾಹಿತ್ಯ ಕಲ್ಪಿಸುವ ನಾಡು ನುಡಿಯ ಸ್ವರೂಪ ಎಂತಹುದು, ಈ ಕಲ್ಪನೆಯ ಹಿಂದಿನ ತಾತ್ವಿಕ ಗೃಹಿಕೆಗಳು, ಒತ್ತಾಸೆಗಳು ಯಾವುವು, ಈ ಕಲ್ಪನೆಯನ್ನು ಸಾಧ್ಯವಾಗಿಸಿದ ಸಾಂಸ್ಕøತಿಕ ಸನ್ನಿವೇಶ ಯಾವೆಲ್ಲ ಪ್ರಶ್ನೆಗಳನ್ನು ಮುಂದಿಡುತ್ತಿದೆ ಸಾಹಿತ್ಯ ಈ ಪ್ರಶ್ನೆಗಳನ್ನು ಹಏಗೆ ನಿಭಾಯಿಸುತ್ತದೆ, ವಿಸ್ತಾರವಾದ ಓದುಗ ವರ್ಗದ ಪಾತ್ರವೇನು ಎನ್ನುವ ಪ್ರಶ್ನೆಯಾಧಾರದಲ್ಲಿ ಒಂದು ಚರ್ಚೆಯನ್ನು ಹುಟ್ಟುಹಾಕಲು ಈ ಸಲದ ಸಹಯಾನ ಸಾಹಿತ್ಯೋತ್ಸವ ಬಯಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಹಯಾನದ ಪರಿಚಯ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರಾರಂಭದಲ್ಲಿ ಸಹಯಾನದ ಕಾರ್ಯಾಧ್ಯಕ್ಷ ವಿಷ್ಣು ನಾಯ್ಕ ಸ್ವಾಗತಿಸಿದರೆ ಚಿಂತನದ ಕಿರಣ ಭಟ್ ವಂದಿಸಿದರು. ನಂತರ ನಡೆದ ಸಂವಾದದಲ್ಲಿ ಡಾ. ಮಲ್ಲಿಕಾರ್ಜುನ ಮೇಟಿ ಮತ್ತು ಬಿ. ಪೀರ್ ಭಾಷಾ ಇವರು ನಾಡು ಮತ್ತು ನುಡಿಯ ಪುನರ್ ನಿರೂಪಣೆಯ ಕುರಿತು ಮಾತನಾಡಿದರು. ಸಂವಾದದಲ್ಲಿ ಡಾ. ನಾಗಪ್ಪ ಗೌಡ, ಡಾ. ಕಿರಣ ಗಾಜನೂರು, ಡಾ. ಆರ್. ಛಲಪತಿ, ಡಾ. ಜಿ.ಎಂ. ಗಣೇಶ, ಕೃಷ್ಣಪ್ಪ ಕೊಂಚಾಡಿ, ವಾಸುದೇವ ಬೆಳ್ಳೆ, ಡಾ. ಅನಸೂಯಾ ಕಾಂಬಳೆ, ಡಾ. ಎಚ್. ಎಸ್ ಅನುಪಮಾ, ಡಾ. ಜಯಪ್ರಕಾಶ ಶೆಟ್ಟಿ, ರಮಾನಂದ ಅಂಕೋಲಾ, ಎಸ್. ವೈ ಗುರುಶಾಂತ ಮುಂತಾದವರು ಪಾಲ್ಗೊಂಡು ಚರ್ಚೆಯನ್ನು ಅರ್ಥಪೂರ್ಣ ಗೊಳಿಸಿದರು. ಕಾವ್ಯಶ್ರೀ ನಾಯ್ಕ ಗೋಷ್ಠಿಯನ್ನು ನಿರ್ವಹಿಸಿದರು.



ನಮ್ಮ ನಾಡು ನುಡಿಗಳು ಆಧುನಿಕಗೊಂಡು ಅರಳಿದುದು ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ, ಅದು ತಂದ ಆಧುನಿಕತೆಯ ಪರಿಪ್ರೇಕ್ಷ್ಯದಲ್ಲಿ ಮತ್ತು ರಾಷ್ಟ್ರೀಯತೆಯ ನಂಟಿನಲ್ಲಿ. ಭಾರತ ರಾಷ್ಟ್ರ ಮತ್ತು ಕನ್ನಡ ನಾಡು ಎನ್ನುವ ಮಹಾಕಲ್ಪನೆಯಲ್ಲಿ ಭಾಷಿಕ, ಜನಾಂಗಿಕ, ಲಿಂಗಭೇದದ, ಪ್ರಾದೇಶಿಕ ಮತ್ತು ಜಾತೀಯ ವೈವಿಧ್ಯಗಳನ್ನು ಕರಗಿಸಿ ಆಧುನಿಕ ಸಮಾನತಾ ಸಮಾಜವನ್ನು ಕಟ್ಟುವುದು ರಾಷ್ಟ್ರೀಯವಾದಿಗಳ ಕನಸಾಗಿತ್ತು. ಆಧುನಿಕತೆಯು ಆಧುನಿಕ ಪೂರ್ವ ಸಮಾಜದ ವೈರುಧ್ಯಗಳನ್ನು ಕರಗಿಸಿ ಸಮಾನತಾ ಸಮಾಜವನ್ನು ನಿರ್ಮಿಸಬಲ್ಲದು ಎನ್ನುವುದು ಅವರ ನಂಬಿಕೆ ಆಗಿತ್ತು. ಆ ಕನಸು ಸಮಾಜದ ಮೇಲುಸ್ತರದ ಜನರಿಂದ, ಸಾಂಸ್ಕøತಿಕ ಗಣ್ಯರಿಂದ ರೂಪಿತವಾದುದರಿಂದಾಗಿ ಸಾಮಾಜಿಕ ಕ್ರಾಂತಿಯನ್ನು ತಳಮಟ್ಟದ ಸಾಮಾಜಿಕ ಪರಿವರ್ತನೆಯನ್ನು ತರಲು ಸಾಧ್ಯವಾಗಿಲ್ಲ. ರಾಷ್ಟ್ರ ಮತ್ತು ಆಧುನಿಕತೆಗಳ ನಿರೂಪಣೆಯಲ್ಲಿ ಗಣ್ಯವರ್ಗಗಳು ಮುಂದಿಟ್ಟ ರೂಪಕಗಳು ಇಂದು ಬಿಕ್ಕಟ್ಟಿಗೆ ಸಿಲುಕಿದೆ. ಆಧುನಿಕತೆಯನ್ನು ಹೊಸ ತಲೆಮಾರು ಪುನರ್ ನಿರೂಪಿಸುವಾಗ ಈ ಪ್ರತಿಮೆಗಳ ವಿಶ್ಲೇಷಣೆ ಮತ್ತು ಪುನರ್‍ನಿರೂಪಣೆ ಅಗತ್ಯ.

Thursday 11 May 2017

ಸಮುದಾಯ ಬಿಇಎಂಎಲ್ ನಗರ, ಕೆಜಿಎಫ್-ಬೇಸಿಗೆ ರಂಗ ತರಬೇತಿ ಶಿಬಿರದ ಉದ್ಘಾಟನೆ



    ಸಮುದಾಯ ಬಿಇಎಂಎಲ್ ನಗರ, ಕೆಜಿಎಫ್ ತನ್ನ 35ನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 10.05.2017 ರ ಬುಧವಾರದಂದು ಬೆಮೆಲ್ ಬಯುಲುರಂಗ ಮಂದಿರದಲ್ಲಿ ಬೇಸಿಗೆ ರಂಗತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
    ಈ ಶಿಬಿರದ ಉದ್ಘಾಟನೆಯನ್ನು ಸಮುದಾಯದ ಉಪಾಧ್ಯಕ್ಷರಾದ ಡಾ||ವಿನೋದ್‍ಕುಮಾರ್ ರವರು ನೆರವೇರಿಸಿದರು, ಅವರು ಮಾತನಾಡುತಾ ಇಂದಿನ ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ರಂಗಭೂಮಿ ಕೊಡುಗೆ ಸಾಕಷ್ಟಿದೆ, ಪ್ರತಿಯೊಬ್ಬರಲ್ಲೂ ಕೂಡ ಒಂದೊಂದು ಪ್ರತಿಭೆಗಳು ಇರುತ್ತದೆ ಅದನ್ನು ಹೊರತರಲು ಈ ಶಿಬಿರ ಪರಿಣಾಮಕಾರಿಯಾದ ಪಾತ್ರವನ್ನು ನಿರ್ವಹಿಸುತ್ತದೆ.  ಸಮಾಜದಲ್ಲಿ ಒಬ್ಬ ಜವಾಬ್ದಾರಿ ಹಾಗೂ ಎಲ್ಲ ಮತ-ಪಂಥಗಳನ್ನು ಮೀರಿ ಮಾನವೀಯತೆಯನ್ನು ಹೇಗೆ ಬೆಳಸಿಕೊಳ್ಳಲು ಮತ್ತು ನಾವು ಹೇಗೆ ಮಾತನಾಡಬೇಕು, ಎಂಬುದನ್ನು ಹಲವಾರು ರಂಗಪಾಠಗಳ ಮೂಲಕ ಇಲ್ಲಿ ತಿಳಿಸಲಾಗುತ್ತದೆ.  ಇಂದು ಅನೇಕ ಶಿಬಿರಗಳು ಲಾಭ ಮಾಡುವುದೇ ಒಂದು ಉದ್ದೇಶವಾಗಿಟ್ಟುಕೊಂಡು ಮಾಡುತ್ತಿದ್ದಾರೆ, ಆದ್ದರಿಂದ ಪೋಷಕರಲ್ಲಿ ನನ್ನ ವಿನಂತಿಯೇನೆಂದರೆ ಇಲ್ಲಿ ನಡೆಯುವ ಶಿಬಿರದ ಪೂರ್ಣಪ್ರಯೋಜನವನ್ನು ತಮ್ಮ ಮಕ್ಕಳು ಪಡೆಯಲು ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ತಾವುಗಳು ನೀಡಬೇಕು ಎಂದು ವಿನಂತಿಸಿದರು.
    ಈ ಶಿಬಿರಕ್ಕೆ ಶುಭ ಕೋರಿ ಬೆಮೆಲ್ ಕಾರ್ಮಿಕ ಕಲ್ಯಾಣ ನಿಧಿಯ ಕಾರ್ಯದರ್ಶಿಯಾದ ಶ್ರೀ ಮಲ್ಲಯ್ಯ ನಂದಿಕೋಲ್‍ಮಠ್ ರವರು ಮಾತನಾಡುತ್ತಾ ನಾನು ಹಲವು ದಶಕಗಳಿಂದ ಸಮುದಾಯದ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ.  ಅವರು ಮಾಡುವ ಬೀದಿ-ರಂಗನಾಟಕಗಳು ಸಮಾಜಕ್ಕೆ ಒಳ್ಳೆ  ಸಂದೇ±ಗಳನ್ನು ನೀಡುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ.  ಈ ಶಿಬಿರದ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಿ ಮತ್ತು ಈ ಶಿಬಿರಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ತಿಳಿಸಿದರು.
    ಶಿಬಿರದ ನಿರ್ದೇಶಕರಾದ ಶ್ರೀ ಅಚ್ಯುತರವರು ಮಾತನಾಡುತ್ತಾ ಈ ಶಿಬಿರದ ಮೂಲಕ ರಂಗಭೂಮಿಯ ಪರಿಚಯವನ್ನು ಇಂದಿನ ತಲೆಮಾರಿನ ಮಕ್ಕಳಿಗೆ ನಾವು ತಿಳಿಸುವುದು.  ಮಕ್ಕಳು ಇಂದು ಅತಿ ಧಾವಂತದ ಬದುಕನ್ನು ನಡೆಸುತ್ತಿದ್ದಾರೆ, ಅವರಲ್ಲಿ ಹುದುಗಿರುವ ಅನೇಕ ಪ್ರತಿಭೆಗಳು ಮರೆಯಾಗುತ್ತಾ ಇದ್ದಾವೆ.  ಪ್ರತಿಯೊಬ್ಬರಿಗೂ ಅವರದೇ ಆದ ಸಾಮಥ್ರ್ಯ ಇದ್ದೇ ಇರುತ್ತದೆ, ಆದರೆ ಅದನ್ನು ಹೊರತೆತೆಯುವ ಕೆಲಸವನ್ನು ರಂಗಭೂಮಿಯಲ್ಲಿ ಮಾತ್ರ ಯಶಸ್ವಿಯಾಗಿ ಮಾಡಬಹುದಾಗಿದೆ.  ಎಲ್ಲರೂ ಇಂದು ನಮ್ಮ ಮಕ್ಕಳೂ ಬರೀ ಡಾಕ್ಟರ್-ಎಂಜೀನೀಯರ್ ಆಗಲಿ ಎಂದು ಹಂಬಲಿಸುತ್ತಿದ್ದಾರೆ ಹೊರತು ಸಂವೇದನಾಶೀಲತೆಯನ್ನು ಹೊಂದಿದ ಪ್ರಜ್ಞಾವಂತ ನಾಗರೀಕರಾಗಲಿ ಎಂದು ಆಶಿಸುವ ಜನ ಕಡಿಮೆಯಾಗುತ್ತಿದ್ದಾರೆ.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಜಗದೀಶ್ ನಾಯಕ್ ರವರು ವಹಿಸಿಕೊಂಡು ಮಾತನಾಡುತ್ತಾ ಸಮುದಾಯ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ತಾವುಗಳೆಲ್ಲರೂ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದ್ದೀರಿ, ಈ ಶಿಬಿರ ಯಶಸ್ವಿಯಾಗಲು ತುಂಬು ಹೃದಯದ ಸಹಕಾರವನ್ನು ನೀಡಬೇಕು ಎಂದರು.   ಕಾರ್ಯಕ್ರಮವನ್ನು ಶ್ರೀಮತಿ ಫ್ಲೋರಾ ರವರು ಸ್ವಾಗತ, ವಂದನಾರ್ಪಣೆ ಶ್ರೀ ಸುರೇಶ್ ಬಾಬು, ಹಾಗೂ ಕಾರ್ಯಕ್ರಮಕ್ಕೆ ಆಶಯಗೀತೆ ಹಾಡಿ ನಿರೂಪಣೆಯನ್ನು ಶ್ರೀ ಜನಾರ್ಧನ ಮಾಡಿದರು.




Tuesday 9 May 2017

ಸಹಯಾನ ಸಾಹಿತ್ಯೋತ್ಸವ


ನಮಸ್ತೆ, ಸಹಯಾನ ಸಾಹಿತ್ಯೋತ್ಸವಕ್ಕೆ ಬನ್ನಿ. ಡಾ. ಆರ್. ವಿ. ಭಂಡಾರಿ ನೆನಪಿನಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ಸಹಯಾನ ಸಾಹಿತ್ಯೋತ್ಸವ ಒಂದು ಮುಖ್ಯ ತಾತ್ವಿಕತೆಯ ಸುತ್ತ ಚರ್ಚೆಯನ್ನು ವಿಸ್ತರಿಸುತ್ತಿದೆ. ನಾಡು ನುಡಿಯನ್ನು ಪುನರ್ ನಿರೂಪಿಸಬೇಕಾದ ಕಾಲದ ಒತ್ತಡದ ಕುರಿತು ಚರ್ಚಿಸುತ್ತಿದೆ. ವರ್ತಮಾನವನ್ನು ಹೊಸತಲೆಮಾರಿನ ಸೃಜನ ಶೀಲ ಬರಹದ ಮೂಲಕ ಪ್ರವೇಶಿಸುವ, ನೋಡುವ ಪ್ರಯತ್ನ ಇದು.
ಇದರಲ್ಲಿ ತಮ್ಮ ಉಪಸ್ಥಿತಿ ತೀರಾ ಅವಶ್ಯ. ತಮ್ಮ ಬರುವನ್ನು ನಾವೆಲ್ಲಾ ಹಾರೈಸುತ್ತೇವೆ. ನೀವು ಬಂದರೆ ಮಾತ್ರವೇ ಸಹಯಾನ ಸಾಹಿತ್ಯೋತ್ಸವ ಯಶಸ್ವಿಯಾಗಲು ಸಾಧ್ಯ. ಹೊನ್ನಾವರ ದಿಂದ ಕೇವಲ ಹತ್ತು ಕಿ.ಮಿ ದೂರದಲ್ಲಿ ಅರೆಅಂಗಡಿ ಸಮೀಪ ಕೆರೆಕೋಣ ಎನ್ನುವ ಊರು ಇದೆ. ಸಹಯಾನದ ಸಂಪರ್ಕಕ್ಕೆ ದೂರವಾಣಿ: 08387262159. ನೀವು ಮುದ್ದಾಂ ಬರಬೇಕು.


ವಿಠ್ಠಲ ಭಂಡಾರಿ, ಕೆರೆಕೋಣ ಸಹಯಾನದ ಪರವಾಗಿ,




















ಆಶಯ:

ಕಳೆದ 8 ವರ್ಷಗಳ ಹಿಂದೆ ನಮ್ಮನ್ನಗಲಿದ ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಪ್ರಾರಂಭವಾಗಿರುವ ‘ಸಹಯಾನ’ ಟ್ರಸ್ಟ್ ಒಂದು ನೋಂದಾಯಿತ ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ಪ್ರತಿವರ್ಷ ಮೇ ತಿಂಗಳು ಹೊನ್ನಾವರದಲ್ಲಿ ನಿರ್ಧಿಷ್ಟ ವಿಷಯದ ಮೇಲೆ ‘ಸಹಯಾನ ಸಾಹಿತ್ಯೋತ್ಸವ’ವನ್ನು ನಡೆಸುತ್ತಿದ್ದೇವೆ. ಈವರೆಗೆ 8 ಸಾಹಿತ್ಯೋತ್ಸವಗಳು ನಡೆದಿವೆ. ಈಗ ಹಮ್ಮಿಕೊಂಡಿರುವುದು 8 ನೇ ಸಾಹಿತ್ಯೋತ್ಸವ.
‘ಸಾಹಿತ್ಯ: ಹೊಸ ತಲೆಮಾರು’, ‘ಮಹಿಳೆ: ಹೊಸ ತಲೆಮಾರು’, ‘ಮಾಧ್ಯಮ: ಹೊಸ ತಲೆಮಾರು’, ‘ಚಳುವಳಿ: ಹೊಸ ತಲೆಮಾರು’, ‘ಓದುವ ಸಂಸ್ಕøತಿ: ಹೊಸ ತಲೆಮಾರು’, ‘ಜಾನಪದ: ಹೊಸ ತಲೆಮಾರು’, ‘ಡಾ. ಅಂಬೇಡ್ಕರ್ ಚಿಂತನೆಗಳು: ಹೊಸ ತಲೆಮಾರು’ ಎನ್ನುವ ಕುರಿತು ಉತ್ಸವಗಳು ನಡೆದಿವೆ. ಈ ಉತ್ಸವದಲ್ಲಿ ನಾಡಿನ ನೂರಾರು ಪ್ರಮುಖ ಚಿಂತಕರು ಭಾಗವಹಿಸಿರುತ್ತಾರೆ. ಇದು ಈ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರಮುಖ ಸಾಹಿತ್ಯ ಕಾರ್ಯಕ್ರಮವಾಗಿದೆ.
ಈ ವರ್ಷ ಕೂಡ ದಿನಾಂಕ 13 ಮೇ 2017 ರಂದು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ “ನಾಡು ನುಡಿಯ ಪುನರ್ ವ್ಯಾಖ್ಯಾನ: ಹೊಸ ತಲೆಮಾರು” ಕುರಿತ ರಾಜ್ಯಮಟ್ಟದ ಸಾಹಿತ್ಯೋತ್ಸವ ನಡೆಸುತ್ತಿದ್ದೇವೆ. ಈ ಉತ್ಸವದಲ್ಲಿ ಕನ್ನಡ ನುಡಿ, ನಾಡು ಮತ್ತು ಅಭಿವೃದ್ಧಿಯ ಕುರಿತ ಗಂಭೀರ ಚರ್ಚೆ ನಡೆಯಲಿದೆ. ್ಲ ವಿಚಾರ ಸಂಕಿರಣ, ಸಂವಾದ, ಕವಿಗೋಷ್ಠಿ, ಜಾನಪದ ಕಲಾಪ್ರದರ್ಶನ, ನಾಟಕ, ಚಿತ್ರಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ… ಇತ್ಯಾದಿಗಳನ್ನು ಏರ್ಪಡಿಸುತ್ತಿದ್ದೇವೆ. ಇದರಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಸುಮಾರು 150-200 ಸಾಹಿತಿ-ಬರಹಗಾರ-ಕಲಾವಿದರು,ಚಿಂತಕರು ಭಾಗವಹಿಸುತ್ತಾರೆ.
2001ರಲ್ಲಿ ಡಾ. ಶಿವರಾಮ ಪಡಿಕ್ಕಲ್ ಅವರು ತಮ್ಮ ‘ನಾಡು-ನುಡಿಯ ರೂಪಕ......[‘ ಸಂಶೋಧನಾ ಪ್ರಬಂಧದಲ್ಲಿ ಕನ್ನಡ ಕಾದಂಬರಿ ಉಗಮ ಹಾಗೂ ಆರಂಭಿಕ ಹಂತದ ಬೆಳವಣಿಗೆಯ ಸಮಾಜ ಶಾಸ್ತ್ರೀಯ ವಿವರಣೆಯೊಂದನ್ನು ನೀಡಿದ್ದರು. ಸಾಹಿತ್ಯ ಕೃತಿಯನ್ನು ಸ್ವಯಂ ಪೂರ್ಣವು ಇತಿಹಾಸಾತೀತವಾದುದು ಆದ ಒಂದು ಶಾಬ್ದಿಕ ರಚನೆಯೆಂದು ನೋಡುವ ನವ್ಯ ವಿಮರ್ಶೆಯ ತಾತ್ವಿಕ ಗ್ರಹಿಕೆಗಳಿಂದ ಬಿಡಿಸಿಕೊಂಡು ಕಾದಂಬರಿಯನ್ನು ಒಂದು .ಸಾಂಸ್ಕøತಿಕ ರೂಪಕ ಎಂದು ಪರಿಗಣಿಸಿ ಚರ್ಚಿಸಿದ್ದರಿಂದ ಕನ್ನಡದ ಮೊದಲ ಕಾದಂಬರಿಗಳು ನಾಡುನುಡಿಯ ರೂಪಕವಾಗಿ ಅವರಿಗೆ ಕಂಡಿತು.
‘ಎಲ್ಲಾ ಸಾಂಸ್ಕøತಿಕ ರೂಪಗಳು ಒಂದು ಕಾಲದ ನಿರ್ದಿಷ್ಟ ಸಂಸ್ಕøತಿಯ ಸನ್ನಿವೇಶದಲ್ಲಿ ಉತ್ಪಾದಿತವಾಗುತ್ತದೆ ಮತ್ತು ಅವು ಮರಳಿ ತಮ್ಮ ಕಾಲದ ಸಂಸ್ಕøತಿಯನ್ನು ಕಟ್ಟುತ್ತದೆ’ ಎಂಬ ನಂಬಿಕೆಯಿಂದ ಹೊರಡುವ ಅವರು ಕಾದಂಬರಿಯನ್ನು ರಚಿಸಿದ ವಿದ್ಯಾವಂತ ವರ್ಗದ ವೈಚಾರಿಕ ವಿನ್ಯಾಸಕ್ಕೂ, ಆ ಮನಃಸ್ಥಿತಿಯನ್ನು ಗ್ರಹಿಸಿದ ಸಮಾಜದ ರಚನೆಗೂ, ಅದೇ ಮನಃಸ್ಥಿತಿಯಿಂದ ಹುಟ್ಟಿದ ಕಾಂದಂಬರಿ ಎಂಬ ಸಾಂಸ್ಕøತಿಕ ರೂಪಕ್ಕೂ ಸಂಬಂಧವಿದೆ ಎಂಬುದು ಅವರ ಮುಖ್ಯ ವಾದ. ಇದೇ ರೀತಿ ಓದುಗ ವರ್ಗವೂ ಸಹಿತ ಲೇಖಕ ವರ್ಗದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದನ್ನೂ ಅವರು ಗುರುತಿಸಿದರು. ಇದು ನೂರು ವರ್ಷಗಳ ಹಿಂದಿನ ಕಾದಂಬರಿಗಳ ಕತೆ.
ಈಗ ನೂರು ವರ್ಷಗಳ ಈಚೆ ಕನ್ನಡ ಸಂಸ್ಕøತಿಯು ಹಲವು ಪಲ್ಲಟಗಳನ್ನು ಕಂಡಿದೆ. ಕನ್ನಡ ಸಾಹಿತ್ಯ ಲೇಖಕ ಹಾಗೂ ಓದುಗ ವರ್ಗಗಳೆರಡೂ ವಿಸ್ತಾರವಾಗಿದೆ. ಹೀಗಾಗಿ ಕಾದಂಬರಿ ಮಾತ್ರವಲ್ಲ, ಎಲ್ಲ ಸಾಹಿತ್ಯ ರೂಪಗಳೂ ಸಹಿತ ಸಾಂಸ್ಕøತಿಕ ರಚನೆಗಳಾದ ಎಂದು ಪರಿಭಾವಿಸಿ ಇಂದಿನ ಸಾಹಿತ್ಯ ಕಲ್ಪಿಸುವ ನಾಡು-ನುಡಿಯ ಸ್ವರೂಪ ಎಂತಹದು? ಈ ಕಲ್ಪನೆಯ ಹಿಂದಿನ ತಾತ್ವಿಕ ಗ್ರಹಿಕೆಗಳೂ, ಒತ್ತಾಸೆಗಳೂ ಯಾವುವು? ಈ ಕಲ್ಪನೆಯನ್ನು ಸಾಧ್ಯವಾಗಿಸಿದ ಸಾಂಸ್ಕøತಿಕ ಸನ್ನಿವೇಶ ಯಾವೆಲ್ಲ ಪ್ರಶ್ನೆಗಳನ್ನು ಮುಂದಿಡುತ್ತಿದೆ? ಸಾಹಿತ್ಯ ಈ ಪ್ರಶ್ನೆಗಳನ್ನು ಹೇಗೆ ನಿಭಾಯಿಸುತ್ತದೆ? ವಿಸ್ತಾರವಾದ ಓದುವ ವರ್ಗದ ಪಾತ್ರವೇನು? – ಇವೇ ಮೊದಲಾದ ಪ್ರಶ್ನೆಗಳನ್ನು ಚರ್ಚಿಸಲು ಇದು ಸಕಾಲವಾಗಿದೆ.
ಈ ಹಿನ್ನೆಲೆಯಲ್ಲಿ ಈ ಸಲದ ಸಹಯಾನ ಸಾಹಿತ್ಯೋತ್ಸವದಲ್ಲಿ ನಮ್ಮ ಕಾಲದ ಸಾಹಿತ್ಯ ರಾಷ್ಟ್ರ, ಭಾಷೆ ಹಾಗೂ ಸಾಂಸ್ಕøತಿಕ ವೈವಿಧ್ಯದ ಪ್ರಶ್ನೆಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನೇ ಮುಖ್ಯ ಪ್ರಶ್ನೆಯಾಗಿ ಚರ್ಚಿಸಬೇಕೆಂದಿದ್ದೀವೆ. ಮತ್ತು ಈ ಚೌಕಟ್ಟು ಇದರಾಚೆಯೂ ವಿಸ್ತರಿಸಿಕೊಳ್ಳಬಹುದು ಮತ್ತು ಇನ್ನಷ್ಟು ಸೂಕ್ಷ್ಮಗೊಳ್ಳಬಹುದಾಗಿದೆ.
ಈ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಸಾಹಿತ್ಯೋತ್ಸವಕ್ಕೆ ತಾವು ಆಗಮಿಸ ಬೇಕಾಗಿ ವಿನಂತಿ.

ರಂಗರಂಗು ರಜಾಮೇಳದ ಎರಡು ನಾಟಕಗಳು


*ಸುಧಾ ಆಡುಕಳ

 ಮಳೆ ಬಂತು ಮಳೆ

 ಕುಂದಾಪುರದ ಗಾಂಧಿಪಾರ್ಕನಲ್ಲಿರುವ ಬಾಲಭವನ ಮಕ್ಕಳ ಹೆಜ್ಜೆಗೆಜ್ಜೆಗಳಿಂದ ಗಿಜಿಗುಡುತ್ತಿತ್ತು. ಬೇಸಿಗೆಯ ಸೆಕೆಗೆ ಮೈಯೆಲ್ಲ ಬೆವರಿ ನೀರಿಳಿಯುತ್ತಿದ್ದಂತೆ ರಂಗದ ಮೇಲೆ ಬಂದ ಪುಟ್ಟ ಪುಟ್ಟ ಮಕ್ಕಳು ತಮ್ಮ ಸಹಜವಾದ ಅಭಿನಯದೊಂದಿಗೆ ತಂಪಾದ ಮಳೆಯನ್ನೇ ಸುರಿಸಿದರು.  ಸಮುದಾಯ ಕುಂದಾಪುರ ಪ್ರತಿವರ್ಷದಂತೆ ಈ ವರ್ಷವೂ ವಲಸೆ ಕಾರ್ಮಿಕರ ಮಕ್ಕಳು ಮತ್ತು ಸರಕಾರಿ ಶಾಲೆಯ ಮಕ್ಕಳನ್ನು ಗುರಿಗುಂಪನ್ನಾಗಿಸಿಕೊಂಡು ಹತ್ತು ದಿನಗಳ ರಂಗುರಂಗಿನ ರಜಾಮೇಳವನ್ನು ಆಯೋಜಿಸಿತ್ತು. ಮಕ್ಕಳ ಶಿಬಿರಗಳು ಸಂತೆಯ ಸರಕಾಗುತ್ತಿರುವ ಸಮಯದಲ್ಲೇ ಸಮುದಾಯ ಮಕ್ಕಳ ಸೃಜನಶೀಲ ಚೈತನ್ಯ ಮತ್ತು ಧಾರಾಳ ಸಂತಸಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಮೇಳವನ್ನು ಆಯೋಜಿಸಿದ್ದರಿಂದ ಅಲ್ಲಿ ರಂಗಭೂಮಿಯೇ ಈ ಮೇಳದ ಕೇಂದ್ರವಾಗಿದ್ದುದು ಸ್ವಾಭಾವಿಕವಾಗಿತ್ತು. ಮಕ್ಕಳು ಬಣ್ಣಗಳೊಡನೆ, ಮಣ್ಣಿನೊಡನೆ ಆಟವಾಡುತ್ತಾ ತಮ್ಮ ರಜೆಗೆ ಚಂದದ ಬಣ್ಣವನ್ನು ತುಂಬಿಸಿಕೊಂಡರು. ಸ್ವಚ್ಛಂದದ ಸುಖ ಮತ್ತು ಒಡನಾಟದ ಕೌಶಲಗಳನ್ನು ಒಟ್ಟಿಗೆ ಬೆರೆಸಿ ಸಮುದಾಯ ನಡೆಸಿದ ಮಕ್ಕಳ ಸಂತೆ ಈ ಮೇಳದ ಯಾವರೀತಿಯದು ಎಂಬುದನ್ನು ತೋರಿಸಿತು.. ಮೇಳದ ಕೊನೆಯ ದಿನ ಪುಟಾಣಿ ಮಕ್ಕಳು ಶ್ರೀಮತಿ ಚಿನ್ನಾ ವಾಸುದೇವ್ ಅವರ ನಿರ್ದೇಶನದಲ್ಲಿ ಮಳೆ ಬಂತು ಮಳೆ ಎಂಬ ನಾಟಕವನ್ನು ಪ್ರದರ್ಶಿಸಿದರು. ರಂಗಕರ್ಮಿ ಅಭಿಲಾಶಾ ಎಸ್. ಅವರ ಹಾಡೊಂದರ ಆಶಯವನ್ನು ಉದಯ ಗಾಂವಕಾರ ಅವರು ಮೇಳದ ಮಕ್ಕಳಿಗೆ ಒಗ್ಗುವಹಾಗೆ ನಾಟಕವಾಗಿ ರೂಪಾಂತರಿಸಿರುವುದು ಮತ್ತು ವಿಸ್ತರಿಸಿರುವುದು ಕೂಡಾ ಈ ಮೇಳದ ಭಾಗವಾಗಿಯೇ ಎಂಬುದು ವಿಶೇಷ. ಬೇಸಿಗೆಯ ರಜೆಯಲ್ಲಿ ಬಿಸಿಲಿನ ಬೇಗೆ, ವಾಹನಗಳ ಸದ್ದು, ಧೂಳಿನ ಉಪಟಳಕ್ಕೆ ಸೋತ ಮಕ್ಕಳೆಲ್ಲ ಪಕ್ಕದ ಕಾಡೊಂದಕ್ಕೆ ಆಟವಾಡಲು ಹೋಗುತ್ತಾರೆ. ಅಲ್ಲಿ ಒಂದು ಕಾಲದಲ್ಲಿ ತುಂಬಿ ಹರಿಯುತ್ತಿದ್ದ ಕೆರೆಯು ಇಂದು ಖಾಲಿಯಾಗಿ ಪಶು ಪಕ್ಷಿಳೆಲ್ಲ ಕಷ್ಟದಲ್ಲಿರುವುದನ್ನು ಕಂಡು ಮರುಗುತ್ತಾರೆ. ಮಳೆಗಾಗಿ ಮೋಡಗಳನ್ನು ಪ್ರಾರ್ಥಿಸಿದಾಗ ಮೋಡಗಳು ಮಕ್ಕಳಿಗೆ ಪ್ರಕೃತಿಯ ಪಾಠವನ್ನು ಹೇಳಿಕೊಡುತ್ತವೆ. ಹಾಗಾಗಿ ಮಕ್ಕಳೆಲ್ಲ ಮೋಡಗಳ ಆಣೆಯಾಗಿ ಒಂದೋಂದು ಗಿಡನೆಡುವ ಪ್ರತಿಜ್ಞೆಗೈಯುತ್ತಾರೆ. ಮೋಡಗಳು ಖುಶಿಗೊಂಡು ಮಳೆಸುರಿಸುತ್ತವೆ. ಪುಟಪುಟನೆ ಹಾರುವ ಕಪ್ಪೆಗಳು, ಠಣ್ಣನೆ ಜಿಗಿಯುವ ಜಿಂಕೆಗಳು, ತೂರಾಡುವ ಮರಗಿಡಗಳು, ಬಿಳಿಯ ರೆಕ್ಕೆ ಬಿಚ್ಚಿಬರುವ ಮೋಡಗಳಾಗಿ ಮಕ್ಕಳ ಅಭಿನಯ ನಿಜಕ್ಕೂ ಉತ್ತಮವಾಗಿತ್ತು. ಗುಂಪಿನಲ್ಲಿ ಸಂಭಾಷಣೆ ಹೇಳುವ ಸಮನ್ವಯತೆ, ರಂಗಚಲನೆಯ ಚುರುಕುತನ ಎಲ್ಲಕ್ಕಿಂತ ಮಿಗಿಲಾಗಿ ಅಭಿನಯವನ್ನು ಮಕ್ಕಳು ಅನುಭವಿಸುವ ಖುಶಿಯೂ ಸೇರಿ ನಾಟಕ ಮುಗಿಯುವಾಗ ಸೆಕೆಯೆಲ್ಲ ಮಾಯವಾಗಿ ಚಪ್ಪಾಳೆಯ ಸುರಿಮಳೆಯಾಯಿತು. ಮಕ್ಕಳ ಗ್ರಹಿಕೆಗೆ ಸುಲಭವಾಗುವಂತಹ ಪುಟ್ಟಪುಟ್ಟ ಸಂಭಾಷಣೆಯನ್ನು ಪ್ರತಿಮಗುವಿಗೂ ಹಂಚಿದ ರೀತಿ ನಾಟಕದಲ್ಲಿ ಎಲ್ಲ ಮಕ್ಕಳೂ ಕ್ರಿಯಾಶೀಲರಾಗಿರುವಂತೆ ಮಾಡಿತು. ಅನಿಸಿಕೆಗಳನ್ನು ಹೇಳುವಾಗ ತಡವರಿಸಿದ ಮಕ್ಕಳು ನಾಟಕದಲ್ಲಿ ಚಿನಕುರಳಿಗಳಂತೆ ಮಾತನಾಡಿ ವಿಸ್ಮಯ ಮೂಡಿಸಿದರು. ವಾಸುದೇವ ಗಂಗೇರ ಮತ್ತು ಗುಂಪಿನವರ ಗಾಯನವೂ ನಾಟಕಕ್ಕೆ ವಿಶೇಷ ಕಳೆಯೇರಿಸಿತ್ತು. ಸಣ್ಣ ಮಕ್ಕಳನ್ನಿಟ್ಟುಕೊಂಡು, ಕಡಿಮೆ ಸಮಯದಲ್ಲಿ ಇಂತದೊಂದು ರಂಗಪ್ರಸ್ತುತಿಯನ್ನು ನೀಡಿದ ಚಿನ್ನ ವಾಸುದೇವ್ ಅವರು ನಿಜಕ್ಕೂ ಅಭಿನಂದನಾರ್ಹರು.


 ಕುಣಿ ಕುಣಿ ನವಿಲೆ



 
    ಕುಂದಾಪುರದ ರಂಗಅಧ್ಯಯನ ಕೇಂದ್ರದ ಶಿಕ್ಷಕರಾಗಿರುವ ವಿನಾಯಕ ಎಸ್. ಎಂ. ಅವರ ನಿರ್ದೇಶನದಲ್ಲಿ ಮೂಡಿಬಂದ ಇನ್ನೊಂದು ನಾಟಕ ಎಚ್. ಎಸ್. ವೆಂಕಟೇಶ ಮೂರ್ತಿಯವರ ‘ಕುಣಿ ಕುಣಿ ನವಿಲೆ’. ಕುಣಿಯುವುದು ನವಿಲಿನ ಸ್ವಾಭಾವಿಕ ಲಕ್ಷಣ. ಈ ನೆಲದ ಶ್ರಮಜೀವಿಗಳ ಪ್ರತಿ ನಡಿಗೆಯೂ ನೋಡುಗರಿಗೆ ಕುಣಿತದಂತೆ ಭಾಸವಾಗುತ್ತದೆ; ಅವರ ಮಾತುಗಳೆಲ್ಲ ಹಾಡಿನ ಗೇಯತೆಯನ್ನು ಪಡೆದುಕೊಳ್ಳುತ್ತವೆ. ಅದನ್ನು ನೋಡಿ, ಕೇಳಿ ಆನಂದಿಸಲು ಬಾರದಷ್ಟು ಅಸೂಕ್ಷ್ಮರಾದ ಆಡಳಿತಗಾರರು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಇಂಥದೊಂದು ಸೂಕ್ಷ್ಮ ಸಾಂಸ್ಕøತಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಎಚ್. ಎಸ್. ವಿ. ಯವರ ನಾಟಕ ಪ್ರಾಣಿಗಳ ಕಥಾನಕದೊಂದಿಗೆ ಭಿತ್ತರಿಸುತ್ತದೆ. ನವಿಲಿನ ಲಾಸ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕಾಡಿನ ರಾಜ ಹುಲಿರಾಯ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಹೊರದೇಶದಿಂದ ಬರುವ ವ್ಯಾಪಾರಿಗೆ ಉಪಾಯವಾಗಿ ನವಿಲಿನ ಮೊಮ್ಮಗಳನ್ನೇ ಮಾರಿಬಿಡುವ ಹುನ್ನಾರ ಮಾಡುತ್ತಾನೆ. ಆದರೆ ನವಿಲುಗಳೆಲ್ಲ ಒಗ್ಗಟ್ಟಿನಿಂದ ಇದನ್ನು ವಿರೋಧಿಸಿ ಅವರನ್ನೆಲ್ಲ ಓಡಿಸುವಲ್ಲಿ ಸಫಲರಾಗುತ್ತಾರೆ. ಮಕ್ಕಳ ಶಿಬಿರದಲ್ಲಿ ಸಿಗುವ ಸೀಮಿತವಾದ ಕಾಲಾವಧಿಯಲ್ಲಿ ಇಂಥದೊಂದು ಕ್ಲಿಷ್ಠಕರವಾದ ನಾಟಕವನ್ನು ಕಟ್ಟುವುದು ಕಷ್ಟದ ಕೆಲಸ. ಆದರೂ ಅನೇಕ ಸಾಂಕೇತಿಕವಾದ ಪ್ರತಿಮೆಗಳನ್ನಿಟ್ಟು, ನಾಟಕದ ಆಶಯವನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಪ್ರಯತ್ನವನ್ನು ನಿರ್ದೇಶಕರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಮುದ್ರಿತ ಸಂಗೀತ ಮಕ್ಕಳ ಸಹಜ ರಂಗಪ್ರಸ್ತುತಿಗೆ ಕೆಲವೆಡೆ ಪೂರಕವಾಗಿರಲಿಲ್ಲ. ಜೊತೆಗೆ ಸಹಜವಾಗಿಯೇ ಕಿಶೋರ ವಯಸ್ಸಿನ ಮಕ್ಕಳಲ್ಲಿರುವ ಸಂಕೋಚ ನಿರ್ಬಿಡೆಯ ಅಭಿನಯಕ್ಕೆ ತೊಡಕಾಗಿತ್ತು. ಹುಲಿಯ ಪಾತ್ರವನ್ನು ನಿರ್ವಹಿಸಿದ ಮಗುವಿನ ಸಂಭಾಷಣೆಯ ವೈಖರಿ ಮನಮುಟ್ಟುವಂತಿತ್ತು. ಬಂಡವಾಳಶಾಯಿಯಾಗಿ ಆಝಾದ್ ಎಲ್ಲರ ಗಮನ ಸೆಳೆದರು. ವೈಯಕ್ತಿಕ ಅಭಿನಯವನ್ನು ಗುಂಪಿನ ಚಲನೆಯಾಗಿ ಮಾರ್ಪಡಿಸಿದ್ದರೆ ಇನ್ನಷ್ಟು ಮಕ್ಕಳಿಗೆ ಅವಕಾಶ ಸಿಗಬಹುದಿತ್ತೇನೋ? ಸಾಮುದಾಯಿಕ ತಲ್ಲಣವೊಂದಕ್ಕೆ ಆಧುನಿಕ ಸ್ಪರ್ಶ ನೀಡಿ ಸಮಕಾಲೀನಗೊಳಿಸುವ ನಿರ್ದೇಶಕರ ಪ್ರಯತ್ನ ಪ್ರಶಂಸನೀಯ.

                                                            _

   ಯುವಜನರ ಮನಸ್ಸು ಸಂವೇದನಾರಹಿತವಾಗುತ್ತಿದೆ, ಅವರ ಧ್ವನಿ ಕರ್ಕಶವಾಗುತ್ತಿದೆ ಎಂದು ದೊಡ್ಡವರು ಗೊಣುಗುತ್ತಾರೆ. ಆದರೆ, ಮಕ್ಕಳಾಗಿರುವಾಗಲೇ ಅವರ ಮನಸ್ಸಿನೊಳಗಿಷ್ಟು ಆರ್ಧೃತೆಯನ್ನು ತುಂಬಿಸಬೇಕಾದ ಜವಾಬ್ದಾರಿಯಿಂದ ನಾಗರಿಕ ಸಮಾಜ ನುಣುಚಿಕೊಳ್ಳುತ್ತಿದೆ. ಇಂಥದೊಂದು ಸಂಧಿಕಾಲದಲ್ಲಿ ವಲಸೆ ಕಾರ್ಮಿಕರ ಮಕ್ಕಳು ಮತ್ತು ಮೇಲ್ವರ್ಗದ ಮಕ್ಕಳನ್ನು ಒಟ್ಟಿಗೆ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಹತ್ತು ದಿನಗಳ ಕಾಲ ಅವರಿಗೆ ಸಾಮಾಜಿಕ ಸಹಬಾಳ್ವೆಯ ಪಾಠವನ್ನು ಹೇಳಿಕೊಟ್ಟ ಸಮುದಾಯ ಮತ್ತು ಅದರೊಂದಿಗೆ ಕೈಜೋಡಿಸಿದ ಇತರ ಸಂಸ್ಥೆಗಳ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾಗಿದೆ. ಸಾಮಾಜಿಕ ಚಳುವಳಿಯ ರೂಪದಲ್ಲಿ ಹುಟ್ಟಿಕೊಂಡ ಸಮುದಾಯ ಈ ಕಾಲಘಟ್ಟದ ಅವಶ್ಯಕತೆಗನುಗುಣವಾಗಿ ಪಡೆದುಕೊಳ್ಳುತ್ತಿರುವ ಸಾಂಸ್ಕøತಿಕ ರೂಪವು ಉತ್ತಮ ಬದಲಾವಣೆಯ ಲಕ್ಷಣವೂ ಹೌದು. ಮಕ್ಕಳ ಮನೋಭೂಮಿಕೆಯನ್ನು ರೂಪಿಸಲು ನಿರಂತರವಾಗಿ ದುಡಿಯುತ್ತಿರುವ ಸಮುದಾಯದ ಎಲ್ಲ ಸಂಗಾತಿಗಳೂ ನಿಜಕ್ಕೂ ಅಭಿನಂದನಾರ್ಹರು.
Also Read
ಮಳೆ ಬಂತು ಮಳೆ : ಒಂದು ನವಿರಾದ ನಿರೂಪಣೆ-ಶ್ರೀಧರ ಎಸ್, ಸಿದ್ಧಾಪುರ  

ಮಳೆ ಬಂತು ಮಳೆ- ಒಂದು ನವಿರಾದ ನಿರೂಪಣೆ.


*ಶ್ರೀಧರ ಎಸ್, ಸಿದ್ಧಾಪುರ


ಸಮುದಾಯ ಕುಂದಾಪುರ, ಬಾಲಭವನ ಸೊಸೈಟಿ, ಬೆಂಗಳೂರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ನಡೆದ ರಂಗರಂಗು ರಜಾ ಮೇಳದ ಕೊನೆಯ ದಿನ ಮೇಳದ ಮಕ್ಕಳಿಂದ ಎರಡು ಮಕ್ಕಳ ನಾಟಕಗಳು ಮೂಡಿ ಬಂದವು. ಸಾಂಪ್ರದಾಯಿಕ ಶಿಸ್ತಿನಿಂದ ದೂರ ಉಳಿದು, ತೀರಾ ಭಿನ್ನವಾದ ಮಕ್ಕಳ ಮೇಳಕ್ಕೆ ತೆರೆ ಬಿತ್ತು. ಮಕ್ಕಳ ಸಂತೆ, ಕ್ರಾಪ್ಟ್ ಮುಂತಾದ ಚಟುವಟಿಕೆಗಳ ಮೂಲಕ ವಿಭಿನ್ನವಾಗಿ ಮೇಳವು ಜರಗಿತು. ಮೊದಲ ನಾಟಕ 'ಮಳೆ ಬಂತು ಮಳೆ'. ಅದರ ಕಿರು ಪರಿಚಯ.
ಚಿಕ್ಕ ಚೊಕ್ಕ ಪಾತ್ರಗಳು. ನಲಿವ ಪಕ್ಷಿಗಳು, ವಯ್ಯಾರದ ಜಿಂಕೆಗಳು, ಕುಪ್ಪಳಿಸುವ ಕಪ್ಪೆ, ಮಂಗಗಳು, ಕುದುರೆ ಹೀಗೆ ಹಲವು ಪ್ರಾಣಿ ಗಡಣಗಳು. ಇವುಗಳ ಚುರುಕು ಮಾತುಗಾರಿಕೆ. ನಡು ನಡುವೆ ಹರಿದು ಬರುವ ಸೂಕ್ತ ರಂಗ ಗೀತೆಗಳು. ಗರಿಗರಿ ಮಾತಿನ ಮಕ್ಕಳ ಅಭಿನಯ ಮನಮುಟ್ಟುವಂತ್ತಿತ್ತು. ಮಳೆಯಿಲ್ಲದೆ ತತ್ತರಿಸಿರುವ ಸೆಖೆಯಲ್ಲಿ ಮಕ್ಕಳು ಪ್ರಾಣಿಗಳು ಸೇರಿ ಊರ ಹೊರಗಿನ ಗುಡ್ಡಕ್ಕೆ ಹೊರಡುತ್ತಾರೆ. ಅಲ್ಲಿಯೂ ಮರಗಳಿಲ್ಲದ ಬೋಳು ಗುಡ್ಡ ಬತ್ತಿದ ಕೆರೆಯನ್ನು ಕಾಣುತ್ತಾರೆ. ಕೊನೆಗೆ ಕಪ್ಪೆಯೊಂದನ್ನು ಮಾತನಾಡಿಸುತ್ತಾರೆ. ಮಳೆಗಾಗಿ ಪುಟಾಣಿ ಕಪ್ಪೆಯೊಂದು ತನ್ನ ತಾತ ಹೇಳಿದ ಮಾತಿನಂತೆ ಮೋಡಕ್ಕೆ ಪ್ರಾರ್ಥನೆ ಸಲ್ಲಿಸಲು ಹೇಳುತ್ತದೆ. ಅವುಗಳೆಲ್ಲಾ ಮೋಡಕ್ಕೆ ಪ್ರಾರ್ಥನೆ ಸಲ್ಲಿಸುತ್ತವೆ. ಮೋಡಗಳು ಪ್ರತ್ಯಕ್ಷವಾಗಿ ಕಡಿದ ಕಾಡು ಗಿಡಗಳ ಕುರಿತು ಹೇಳುತ್ತವೆ. ಮೂರ್ಖ ಮನುಜ ಮಾಡುವ ಪ್ರಾರ್ಥನೆಯಿಂದ ಮಳೆ ಬರುವುದಿಲ್ಲ. ಮಳೆ ಬರುವುದು ಮರ ಗಿಡಗಳಿಂದ ಎಂದು ಮೋಡಗಳು ಹೇಳ್ತವೆ. ಮರ ಕಡಿಯದಿರಿ ಗಿಡ ನೆಡಿ ಎಂಬ ಸಂದೇಶವನ್ನು ಕೊನೆಗೆ ಸಾರುತ್ತದೆ. ಮರಿ ಕಪ್ಪೆಯೊಂದು ಗಿಡ ನೆಡುವ ಮೂಲಕ ನಾಟಕವು ಮುಗಿಯುತ್ತದೆ. ದೊಡ್ಡವರ ಜಗತ್ತಿನ ಮೂರ್ಖ ನಡೆಗಳನ್ನು ಹೇಳುತ್ತಾ ನಮ್ಮನ್ನು ವಿಶ್ಲೇಷಣೆಗೆ ಹಚ್ಚುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾಯಿತು. ರಂಗ ಚಲನೆ, ಪರಿಕರ, ವೇಷ ಭೂಷಣ, ಪಾತ್ರಧಾರಿಗಳ ಸೂಕ್ತ ಬಳಕೆಯಿಂದ ನಾಟಕ ನೋಡುಗರ ಗಮನ ಸೆಳೆಯಿತು. ನಾಟಕದ ಓಘಕ್ಕೆ ಪೆಟ್ಟು ಬೀಳದಂತೆ ಅಲ್ಲಲ್ಲಿ ಸಂಗೀತವನ್ನು ಬಳಸಿದ ರೀತಿ ನಿಜಕ್ಕೂ ಅದ್ಭುತ. ಕಿರು ಅವಧಿಯಲ್ಲಿ ಎಲ್ಲೂ ಗೊಂದಲಕ್ಕೆ ಅವಕಾಶ ನೀಡದಂತೆ ಮಕ್ಕಳು ಅಭಿನಯಿಸಿರುವುದು ಶ್ಲಾಘನೀಯ. ಸುಮಾರು 30 ಮಕ್ಕಳ ಚಲನೆಗೆ ವೇದಿಕೆ ಬಹಳವೇ ಚಿಕ್ಕದಾಯಿತು ಎಂಬುದು ನನ್ನ ಅನಿಸಿಕೆ.
ವಾಸುದೇವ ಗಂಗೇರ ವಿನ್ಯಾಸ ಮತ್ತು ರಂಗ ಗೀತೆಗಳು ನಮ್ಮನ್ನು ಮೂಕವಿಸ್ಮಿತಗೊಳಿಸಿದವು. ಸ್ಥಳೀಯ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡ ಪರಿ ಅನನ್ಯ. ರಂಗ ಗೀತೆಗಳು ಮಕ್ಕಳ, ದೊಡ್ಡವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತವು. ಚಿನ್ನಾ ವಾಸುದೇವ್ ನಿರ್ದೇಶನದಲ್ಲಿ ಮಕ್ಕಳ ಅಭಿನಯ ಚೆನ್ನಾಗಿತ್ತು. ಇವತ್ತಿನ ಕಾಲ ಮಾನಕ್ಕೆ ಸರಿಹೊಂದುವ ಕತೆಯನ್ನೇ ಅವರು ಆಯ್ಕೆ ಮಾಡಿಕೊಂದ್ದರು. ಅಭಿಲಾಷಾ ಹಂದೆಯವರ ಹಾಡೊಂದರ ಆಶಯವನ್ನು ಉದಯ ಗಾಂವಕರ  ಗರಿ ಗರಿ ಮಾತುಗಳ ಕಥಾನಕವಾಗಿಸಿದರು. ವಾಸ್ತವಿಕ ನೆಲೆಗಟ್ಟಿನ ಕತೆಯನ್ನು ಪ್ರಸ್ತುತ ಕಾಲದ ಓಘಕ್ಕೆ ಸರಿಯಾಗಿ ಪೋಣಿಸಿದ್ದರು. ನಾಟಕದ ಮೊದಲಿಗೆ ಸಮುದಾಯದ ಅಧ್ಯಕ್ಷರಾದ ಉದಯ್
ಗಾಂವಕರ ಮಾತನಾಡಿ "ಬೇಸಿಗೆ ಶಿಬಿರಗಳು ಬರಿ ಮತ್ತೊಂದು ಶಾಲೆಯಂತಾಗದೆ ಮಗುವಿನ ಅಜ್ಜಿ ಮನೆಯಂತೆ ಮಕ್ಕಳು ಹಾಡಿ, ಕುಣಿವ, ನಲಿವ ತಾಣಗಳಾಗಬೇಕು ಅಂತಹ ಒಂದು ಸಣ್ಣ ಪ್ರಯತ್ನವಿದು." ಎಂದರು.
Also read
  ರಂಗರಂಗು ರಜಾಮೇಳದ ಎರಡು ನಾಟಕಗಳು -ಸುಧಾ ಆಡುಕಳ

Monday 1 May 2017

ಸಹಯಾನ ಸಾಹಿತ್ಯೋತ್ಸವ-ನಾಡು ನುಡಿಯ ಪನರ್ ನಿರೂಪಣೆ: ಹೊಸ ತಲೆಮಾರು

8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ            
13 ಮೇ, 2017, ಶನಿವಾರ
ಕೆರೆಕೋಣ

ಸರ್ವಾಧ್ಯಕ್ಷರಾಗಿ ಡಾ. ಶಿವರಾಮ ಪಡಿಕ್ಕಲ್ 


ಮೇ 13, 2017 ರಂದು ಶನಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಏರ್ಪಡಿಲಾಗುತ್ತಿದೆ. “ನಾಡು ನುಡಿಯ ಪುನರ್ ನಿರೂಪಣೆ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷರಾಗಿ ಖ್ಯಾತ ವಿಮರ್ಶಕರು, ಸಾಹಿತ್ಯ ಸಂಸ್ಕøತಿ ಚಿಂತಕರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಶಿವರಾಮ ಪಡಿಕಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಡಾ. ಶಿವರಾಮ ಪಡಿಕ್ಕಲ್ ಅವರು ಮೂಲತಃ ದಕ್ಷಿಣ ಕನ್ನಡದವರು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅನ್ವಯಿಕ ಭಾಷಾ ವಿಜ್ಞಾನ ಮತ್ತು ಭಾಷಾಂತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಎಂ.ಎ ವಿದ್ಯಾಭ್ಯಾಸವನ್ನು ಮಾಡಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ‘ನಾಡು ನುಡಿಯ ರೂಪಕ: ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ ಕಾದಂಬರಿಗಳು’ ಎನ್ನುವುದು ಇವರ ಮೊದಲ ಸಂಶೋಧನಾ ಗ್ರಂಥ.
ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಪದ್ಮಾಕರ್ ದಾಡೇಗಾಂವ್ಕರ್ ಅವರೊಂದಿಗೆ ಸೇರಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಪ್ರೊ. ಉದಯನಾರಾಯಣ ಸಿಂಗ್ ಜೊತೆ ಸುನೀತಿ ಕುಮಾರ್ ಚಟರ್ಜಿ; ಎ ಸೆಂಟಿನರಿ ಟ್ರಿಬ್ಯೂಟ್ ಎನ್ನುವ ಪುಸ್ತಕವನ್ನು ಸಾಹಿತ್ಯ ಅಕಾಡೆಮಿಗಾಗಿ ಹಾಗೂ ತಾರಿಖ್ ಖಾನ್ ಜೊತೆಗೆ ವಾಗರ್ಥ ಕೃತಿಯನ್ನು ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕಾಗಿ ಸಂಪಾದಿಸಿದ್ದಾರೆ.
ಅಕಾಡೆಮಿಯು ಪ್ರಕಟಿಸಿದ ಬಾರತೀಯ ಸಾಹಿತ್ಯಗಳ ಚರಿತ್ರೆಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಇಂದಿರಾಬಾಯಿಯ ಇಂಗ್ಲೀಷ್ ಅನುವಾದವನ್ನು ಸಧ್ಯದಲ್ಲೇ ಆಕ್ಸಫರ್ಡ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಲಿದೆ. ಇದನ್ನು ಇವರು ವನಮಾಲಾ ವಿಶ್ವನಾಥ ಅವರೊಂದಿಗೆ ಸೇರಿ ಭಾಷಾಂತರಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ, ಭಾಷಾಂತರ, ವಸಾಹತೋತ್ತರ ವಿಮರ್ಶೆ, ಸಾಂಸ್ಕøತಿಕ ಅಧ್ಯಯನ ವಿಷಯಗಳಲ್ಲಿ ಅಕೆಡಮಿಕ್ ಆಸಕ್ತಿ ಹೊಂದಿರುವಕಿವರು ಆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಿಗಾಗಿ ಬರೆದಿದ್ದಾರೆ.
ಇವರು ಬಿ.ಎಚ್.ಶ್ರೀಧರ ಪ್ರಶಸ್ತಿ ಮತ್ತು ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಥ ಮಹ್ವದ ಸಾಹಿತ್ಯ ಸಂಸ್ಕøತಿಯ ಚಿಂತಕರಾದ ಡಾ. ಶಿವರಾಮ ಪಡಿಕ್ಕಲ್ ಅವರು ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ.
ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಒಂದು ಸಾಂಸ್ಕøತಿಕ ಕೇಂದ್ರ ಕಟ್ಟುವ ಜವಾಬ್ದಾರಿಯ ಭಾಗವಾಗಿ ಅವರದೇ ಮನೆಯಂಗಳದಲ್ಲಿ ನಡೆಯುವ ಈ ಉತ್ಸವದಲ್ಲಿ ತಾವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ‘ಸಹಯಾನ’ದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ, ಕಾರ್ಯದರ್ಶಿ ವಿಠ್ಠಲ ಭಂಡಾರಿ, ಕೆರೆಕೋಣ, ಖಜಾಂಚಿ ಮಾಸ್ತಿ ಗೌಡ ಅವರು ವಿನಂತಿಸಿದ್ದಾರೆ.