Sunday 19 February 2017

ಉಡುಪಿಯಲ್ಲಿ ವೈಜ್ಞಾನಿಕ ಮನೋಭಾವ ಕುರಿತು ಕಾರ್ಯಾಗಾರ

ವೈಜ್ಷಾನಿಕ ಮನೋಭಾವವನ್ನು ಬೆಳೆಸುವ ಉದ್ಧೇಶದಿಂದ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ವಿಚಾರವಾದಿಗಳಾದ ಶ್ರೀ ನರೇಂದ್ರ ನಾಯಕ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು. ಸಂವಾದ, ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ದೃಶ್ಯ-ಶ್ರವಣ ಮಾಧ್ಯಮಗಳ ಬಳಕೆಯ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಆಸಕ್ತರು ಭಾಗವಹಿಸಬಹುದಾಗಿದೆ.
ದಿನಾಂಕ: 12 ಮಾರ್ಚ್ 2017, ರವಿವಾರ ಪೂ 10.00 ರಿಂದ ಸಂಜೆ 5.00
ಸ್ಥಳ: ಕಮಲಾ ಬಾಳಿಗಾ ಸಭಾಭವನ, ಡಾ. ಏ.ವಿ ಭಾಳಿಗಾ ಆಸ್ಪತ್ರೆಯ ಮೇಲೆ. ವಿ ಎಮ್ ನಗರ, ದೊಡ್ಡನಗುಡ್ಡೆ , ಉಡುಪಿ.

ಸೀಮಿತ ಪ್ರವೇಶಾವಕಾಶವಿರುವುದರಿಂದ ಮುಂಚಿತವಾಗಿ ಹೆಸರು ನೋಂದಾಯಿಸಿ. ಭಾಗವಹಿಸುವಿಕೆಯನ್ನು ಖಾತರಿಪಡಿಸಿ.
ಭಾಗವಹಿಸುವವರು ತಮ್ಮ ವಿವರಗಳನ್ನು Narendra Nayak ಅವರ Inbox ನಲ್ಲಿ ನೀಡಲು ವಿನಂತಿಸಿದೆ.
ಭಾಗವಹಿಸಲಿಚ್ಛಿಸುವ ಕುಂದಾಪುರ ತಾಲೂಕಿನ ಸ್ನೇಹಿತರು Uday Gaonkar ಅವರನ್ನು 9481509699 ನಲ್ಲಿ ಸಂಪರ್ಕಿಸಲು ಕೋರಿದೆ.


The one day workshop on development of scientific temper for Udupi district is on the 12th March, Sunday from 10 am to 5pm. at Kamala Baliga Hall above A.v.baliga memorial hospital vm nagar, doddanagudde udupi 576102. Medium of communication is Kannada. The course contents are lectures, videos, demosntrations and Q-A sessions.
Participation by prior registration only and number of seats are limited. Those willing to participate can please inbox me with all details.

Saturday 18 February 2017

ವರ್ಣಾಂಜಲಿ

ಅಪಘಾತದಿಂದಾಗಿ ನಮ್ಮನ್ನಗಲಿದ ಕಲಾವಿದ ಭೋಜುಹಾಂಡ ಒಬ್ವ ಶ್ರೇಷ್ಟ ಶಿಕ್ಷಕರಾಗಿದ್ದರು. ಸ್ವತಃ ಉತ್ತಮ ಕಲಾವಿದರಾಗಿದ್ದರೂ ತಮ್ಮ ಪ್ರತಿಭೆಯನ್ನು ಎಳೆಯ ಮಕ್ಕಳ ಸ್ರಜನಶೀಲತೆಯನ್ನು ಬೆಳಕಿಗೆ ತರುವಲ್ಲಿಯೇ ಧಾರೆಯೆರೆದ ಅವರ ನೆನಪುಗಳು ನಮ್ಮ ಮನದಾಳದಲ್ಲಿ ಸದಾ ಹಸಿರು. ಭೋಜುಹಾಂಡರಿಂದ ಸ್ಪೂರ್ತಿ ಪಡೆದು, ಕಲೆಯ ಪಟ್ಟುಗಳನ್ನು ಕಲಿತು ತಮ್ಮ ಬದುಕಿನಲ್ಲಿ ಬಣ್ಣಗಳಿಗೂ ಜಾಗ ನೀಡಿದ ಅವರ ಸಾವಿರಾರು ವಿದ್ಯಾರ್ಥಿಗಳು ನಾಡಿನ ತುಂಬಾ ಮತ್ತೆ ಮತ್ತೆ ಹಣತೆಗಳನ್ನು ಹಚ್ಛುತ್ತಾ ಭೋಜುಹಾಂಡರನ್ನು ಜೀವಂತವಾಗಿರಿಸಿದ್ದಾರೆ. ‌
ಕುಂದಾಪುರ ಸಮುದಾಯವು ಪ್ರತಿ ಬೇಸಗೆಯಲ್ಲಿ ನಡೆಸುವ ರಂಗ ರಂಗು ರಜಾಮೇಳದಲ್ಲಿ ಭೋಜುಹಾಂಡರು ಅವಕಾಶ ವಂಚಿತರಾದ ಮಕ್ಕಳ ಕೈಗೆ ಕುಂಚ ನೀಡಿ ಕೃಥಾರ್ತರಾಗುತ್ತಿದ್ದರು. ಸಮುದಾಯದ ಜೀವಪ್ರೀತಿಯ ಕೆಲಸಗಳಲ್ಲಿ ಅವರು ಸದಾ ಜೊತೆಯಾಗುತಿದ್ದರು.
ಅವರ ನೆನಪಲ್ಲಿ ಈ ರವಿವಾರ, ಪೂರ್ವಾಹ್ನ 10ಕ್ಕೆ (19/2/2017) ಅವರು ಪ್ರತಿವಾರವೂ ತರಗತಿ ನಡೆಸುತ್ತಿದ್ದ ವಡೇರಹೋಬಳಿ ಹೈಸ್ಕೂಲಿನ ಸಭಾಭವನದಲ್ಲಿ ಜಲವರ್ಣ ಪ್ರಾತ್ಯಕ್ಷಿಕೆ ಕಾರ್ಯಕ್ರಮವಿದೆ. ಚಿತ್ರಕಲಾ ಶಿಕ್ಷಕರು ಸಮುದಾಯದ ಜೊತೆಯಲ್ಲಿ ಭೋಜುಹಾಂಡರಿಗೆ ಅರ್ಪಿಸುವ ವರ್ಣಾಂಜಲಿ ಇದು. ನೀವೂ ಜೊತೆಗೂಡಿ ಎಂಬುದು ನಮ್ಮ ಪ್ರೀತಿಯ ಒತ್ತಾಯ.

 

Monday 13 February 2017

ಕನ್ನಡದ ಕಾವ್ಯ ಪರಂಪರಯನ್ನು ಕಾಲೇಜ ವಿಧ್ಯಾರ್ಥಿಗಳ ಮುಂದೆ ಬಿಚ್ಚಿಡುವ ಸಮುದಾಯದ ಕಾವ್ಯ ರಂಗ ತಿರುಗಾಟ

ಯುವಕರದನಿ ಇಂದು ಕರ್ಕಶವಾಗುತ್ತಿರುವ ಹೊತ್ತಿನಲ್ಲಿ ಅವರ ದೇಹಕ್ಕೆ ಕಾವ್ಯದ ಸಾಹಚರ್ಯ ಒದಗಿಸುವ ಸಾಮಾಜಿಕ ಉದ್ದೇಶದಿಂದ ಶಾಸನ ಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ಬರಹಗಳ ತುಣುಕನ್ನು ಸಂಬಂಧಗಳ ಪರಿಕಲ್ಪನೆಯಾಧಾರದಲ್ಲಿ ಹೆಣೆದು ಕಾವ್ಯರಂಗ ರೂಪಕವಾಗಿಸಲಾಗಿದೆ. ಕನ್ನಡದ ಲೋಕಗೃಹಿಕೆ, ಕನ್ನಡದ ವಿವೇಕ ಇವನ್ನು ಇಂದಿನ ಯುವಕರಿಗಾಗಿ ಮರುನಿರೂಪಿಸುವ ಒಂದು ಪ್ರಯತ್ನ ಭಾಗವಾಗಿ ಸಮುದಾಯದ ನಟ ನಟಿಯರು ಈ ಕಾವ್ಯಗಳನ್ನು ಆಡುತ್ತಾರೆ, ಹಾಡುತ್ತಾರೆ,ಕೆಲವನ್ನು ಅಭಿನುಸುತ್ತಾರೆ.  ಒಂದೂವರೆಗಂಟೆ ಕಾಲ ಸುಮಾರು 31 ಸಾಹಿತ್ಯಿಕ ಬರಹವನ್ನು ಇಲ್ಲಿ ರಂಗಕ್ಕೆತರಲಾಗಿದೆ. ಸಾಹಿತ್ಯ ಕಥನಗಳ ರಂಗ ಓದು ಇದು. ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಅನುಕೂಲವಾಗುವುದೆಂಬ ಶೈಕ್ಷಣಿಕ ಉದ್ದೇಶವಿದೆ.

     ಹಣತೆ ಹಚ್ಚುತ್ತೆವೆ ನಾವು ಕತ್ತಲನ್ನು ಗೆಲ್ಲುತ್ತೆನೆಂಬ ಜಿದ್ದಿನಿಂದಲ್ಲ ಇರುವಷ್ಟು ಹೊತ್ತು ನಿಮ್ಮ ಮುಖ ನಾವು ನನ್ನ ಮುಖ ನೀವು ನೋಡಬಹುದೆಂಬ ಆಶೆಯಿಂದ ಎಂಬ ಜಿಎಸ್‍ಎಸ್ ರ ಪದ್ಯದಿಂದ ಆರಂಬವಾಗುವ ಈ ಕಾವ್ಯರಂಗ ಕನ್ನಡ ನಾಡು ರೂಪಿಸಿಕೊಂಡ ಬಂದ ಸಂಬಂದಗಳ ಜಾಲವನ್ನು ಹೆಣೆಯುವ ಕೆಲವು ನುಡಿಗಳನ್ನು ಕವಿರಾಜ ಮಾರ್ಗದಿಂದ ಮತ್ತು ದೂರದ ಬನವಾಸಿ ಕುರಿತು ಪಂಪನು ಹೇಳುವ ಚಾಗದ ಭೋಗದ ಸಾಲುಗಳನ್ನು ಒಳಗೊಂಡು  ಮನುಷ್ಯರಲ್ಲಿರುವ ಜಾತಿಸೂತಕ, ಕರ್ಮಸೂತಕವನ್ನು ಕಿತ್ತಿ ಅವರೆಲ್ಲರನ್ನು ಒಂದುಮಾಡಲು ಹೋರಟ ಶರಣ ಪರಂಪರೆಯನ್ನು ನೆನೆಯುತ್ತಾ  ಕುವೆಂಪುರವರ ರಾಮಾಯಣ ದರ್ಶನಂ ಹಾಗೂ ಶಿವರಾಮ ಕಾರಂತರ ಚೋಮ ಹಾಗೂ ಪ್ರಕೃತಿ ಸಂಬಂದಗಳ ಕಲ್ಪನಾ ಸ್ವರೂಪ ಸಾರವು ಬೇಂದ್ರೆಯವರ ಬೃಂಗದ ಬೆನ್ನೇರಿ ಬಂತು ಹಾಗೂ ವರ್ಗಅಸಮಾನತೆ, ಧರ್ಮದ ಹೆಸರಿನಲ್ಲಿ ನಡೆಯುವ ಡೊಂಗಿತನ ಸಾರುವ  ಜಾನಪದ ಹಾಗೂ ತತ್ವಪದದ ಕೇಲವು ಸಾಲುಗಳನ್ನು ಧ್ವನಿಪೂರ್ವಕವಾಗಿ ಇಲ್ಲಿ ನಿರೂಪಿಸಲಾಗಿದೆ. ಸ್ತ್ರೀ ಸಂಬಂದಗಳ ಕುರಿತು ಹೇಳುವ ಪ್ರತಿಭಾ ನಂದಕುಮಾರ ಹಾಗೂ ವೈದೇಹಿಯವರ ಕವನದ ಸಾಲುಗಳು ಇಲ್ಲಿ ಹೆಣ್ಣಿಣ ಶೋಷಣೆಯ ಮುಖಗಳನ್ನು ಅನಾವರಣ ಮಾಡಿದೆ. ದೇವನೂರರ ಒಡಲಾಳ ಸಿದ್ದಲಿಂಗಯ್ಯನವರ ನೆನ್ನೆ ದಿನ ನನ್ನ ಜನ  ಕವನಗಳು ಇವತ್ತೀನ ಶೋಷಣೆಯನ್ನು ಸಾರುತ್ತವೆ. ಕೊನೇಗೆ ಸು,ರಂ ಎಕ್ಕುಂಡಿಯವರ ಮೂಡಲ ದೀಪದೋಂದಿಗೆ ಕಾವ್ಯರಂಗ ಮುಕ್ತಾಯವಾಗುತ್ತದೆ. ಒಟ್ಟಾರೆಯಾಗಿ ಕಾವ್ಯರಂಗ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗು ಉಪನ್ನಾಸಕರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ನಮ್ಮ ಕಾಲಾವಿದರಾದ ರಂಜಿತಾ ಜಾಧವ.ರೇಶ್ಮಾ ತಿಪಟೂರ. ಧೀರಜ್, ಯಲ್ಲಪ್ಪ ಗಾಣಗೇರ, ಚಿದಂಬರ ಕುಲಕರ್ಣಿ, ಮಹಾಂತೇಶ ದೊಡ್ಡಮನಿ, ಪ್ರಶಾಂತ, ವಿನಾಯಕ ಈಳಗೇರ , ಬಸವರಾಜ ಕಮ್ಮಾರ, ಕುಮಾರ ಬದಾಮಿ, ಚಂದ್ರು ಕಿಲ್ಲೇದಾರ, ಪ್ರಶಾಂತ ಒಳಗೊಂಡ 13 ಜನರ ಕಲಾತಂಡ ಎಲ್ಲರನ್ನು ಮಂತ್ರಮುಗ್ದರನ್ನಾಗಿಸುವ ಹಾಗೆ ಅಭಿನಯಿಸಿದರು. ಈ ಕಾವ್ಯ ರಂಗ ಯಶಸ್ವಿ ಹಿಂದೆ ನಿರ್ದೇಕರಾದ ಡಾ.ಶ್ರೀಪಾಧ ಬಟ್ ಹಾಗೂ ರಂಗಪಠ್ಯ ಸಿದ್ದಪಡಿಸಿದ ಡಾ.ಎಂ.ಜಿ ಹೆಗಡೆ ಯವರ ಶ್ರಮವಿದೆ. ಇವರೆಲ್ಲರ ಶ್ರಮ ಸಾರ್ಥಕಗೊಂಡದ್ದು ಈ ಸಮುದಾಯದ ಕಾವ್ಯರಂಗ ತಿರುಗಾಟದಿಂದ.


  ಈ ಕಾವ್ಯರಂಗ ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ 21-01-2017 ರಿಂದ 15 ದಿನಗಳ ಕಾಲ ಡಾ.ಶ್ರೀಪಾದ ಭಟ್ ರವರ ನಿರ್ದೇಶನದಲ್ಲಿ ತರಬೇತಿ ಹೊಂದಿ, ದಿನಾಂಕ; 03-02-2017 ರಂದು ಧಾರವಾಡದ ಕನ್ನಡ ಸಾಹಿತ್ಯಭವನದಲ್ಲಿ ಚಿದಂಬರರಾವ ಜಂಭೆಯವರಿಂದ ಯದ್ಘಾಟನೆಗೊಂಡು ಧಾರವಾಡ,ಬೆಳಗಾಂ,ಗದಗ ಜಿಲ್ಲೆಗಳ ಕಾಲೇಜುಗಳಲ್ಲಿ ಪ್ರದರ್ಶನ ನೀಡಿತ್ತಿದೆ.
ರಂಗ ಪಠ್ಯ: ಡಾ.ಎಂ.ಜಿ.ಹೆಗಡೆ; ವಿನ್ಯಾಸ: ದಾಮೋದರ ನಾಯ್ಕ, ಹೊನ್ನಾವರ; ನಿರ್ದೇಶನ: ಡಾ.ಶ್ರೀಪಾದ ಭಟ್ ಸಹ ನಿರ್ದೇಶನ;