Sunday 1 January 2017

ಕುಂದಾಪುರ ಸಮುದಾಯ- ಕಥಾಓದು


ಕುಂದಾಪುರ ಸಮುದಾಯವು ಪ್ರತಿ ತಿಂಗಳ ಮೊದಲ ರವಿವಾರದಂದು ಕಥಾಓದು ಕಾರ್ಯಕ್ರಮವನ್ನು ನಡೆಸುತ್ತಿದೆ.ಪ್ರತಿತಿಂಗಳೂ ಕನ್ನಡದಲ್ಲಿ ಪ್ರಕಟಗೊಂಡಿರುವ ಒಂದು ಸಣ್ಣ ಕಥೆಯನ್ನು ಒಬ್ಬ ಅತಿಥಿ ಓದುತ್ತಾರೆ.ಓದು ಸಂಸ್ಕೃತಿಯೊಂದನ್ನು ಯುವಜನರಲ್ಲಿ ಮೂಡಿಸುವ ಪ್ರಯತ್ನವಾಗಿ ಆರಂಭವಾದ  ಈ ಕಾರ್ಯಕ್ರಮಕ್ಕೆ ನಿಯಮಿತ ಕೇಳುಗರ ವೃಂದವೊಂದು ಸೃಷ್ಟಿಯಾಗುತ್ತಿರುವುದು ಸಂತಸದ ವಿಷಯ.  ಈ  ಹಿಂದಿನ ತಿಂಗಳಲ್ಲಿ  ರಂಗನಿರ್ದೇಶಕ ವಾಸುದೇವ ಗಂಗೇರ ವಸುದೇಂದ್ರರ ನಮ್ಮಮ್ಮ  ಅಂದ್ರೆ   ನಂಗಿಷ್ಟ  ಎಂಬ ಪ್ರಬಂಧವನ್ನು ಓದಿದ್ದರೆ ಅದಕ್ಕೂ ಹಿಂದಿನ ತಿಂಗಳಲ್ಲಿ ುಪನ್ಯಾಸಕ ಹಾಗೂ ಹವ್ಯಾಸಿ ಯಕ್ಷಗಾನ ಭಾಗವತರಾದ ವೆಂಕಟರಮಣ ಬಿ ತೇಜಸ್ವಿಯವರ ಮಾಯಾಮೃಗ ಕಥೆಯನ್ನು ವಾಚಿಸಿದ್ದರು.

 ಈ ತಿಂಗಳು ಭಂಡಾರ್ಕರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ  ಶಿಕ್ಷಕರಾದ ವಿನಾಯಕ ರವರು ಡಾ ಶ್ರೀನಿವಾಸ ವೈದ್ಯರವೆರ  ಗಧೆ ಪಂಚವೀಸಿ ಎಂಬ ಕತೆಯನ್ನು ರಂಗತಂತ್ರಗಳ ಮೂಲಕ ನಿರೂಪಿಸಿದರು.

No comments:

Post a Comment