Wednesday, 21 December 2016

ಸಮುದಾಯ ಆರನೇ ರಾಜ್ಯ ಸಮ್ಮೇಳನ ಮೈಸೂರು

.
13ಮತ್ತು 14ನೇ ನವಂಬರ್ 2016 ರಂದು ಮೈಸೂರಿನಲ್ಲಿ ನಡೆದ 6ನೇ ರಾಜ್ಯ ಸಮ್ಮೇಳನ
 ಉದ್ಘಾಟನಾ ಕಾರ್ಯಕ್ರಮ
ಸರ್ಕಾರವನ್ನೇ ನಡುಗಿಸಿದ ದಲಿತರು, ಬಂಡಾಯಗಾರರು- 70ರ ದಶಕವನ್ನು ಸ್ಮರಿಸಿದ ಪ್ರೊ.ಅರವಿಂದ ಮಾಲಗತ್ತಿ.
ಹುಲಿ ಮತ್ತು ಆನೆ ಪರಸ್ಪರ ಸ್ನೇಹ ಬಯಸಿದಂತೆ 70ರ ದಶಕದಲ್ಲಿ ಒಂದಾಗಿದ್ದ ದಲಿತರು ಮತ್ತು ಬಂಡಾಯಗಾರರು ತಮ್ಮ ಒಗ್ಗಟ್ಟಿನ ಮಂತ್ರದಿಂದ ಸರ್ಕಾರವನ್ನೇ ನಡುಗಿಸಿದರು. ಆದರೆ ನಂತರದ ಕಾಲಘಟ್ಟ ತದ್ವಿರುದ್ದವಾಗಿದ್ದು ವಿಪರ್ಯಾಸ. ಒನ್ ವೇ ಟ್ರಾಪಿಕ್‍ನಂತೆ ಮನ್ಕೀ ಬಾತ್ ತೋರುತ್ತದೆ. ಒನ್ ವೇ ಟಾಕ್‍ಗಿಂತ ಮುಖಾಮುಖಿ ಸಂವಾದ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಪರಿಕಲ್ಪನೆ ಬಿದ್ದು ಹೋಗಿದ್ದು ಬದಲಿಗೆ ಮಾಧ್ಯಮ ಪೌರೋಹಿತ್ಯ ಬೆಳಕಿಗೆ ಬರುತ್ತಿದೆ, ಅದರಲ್ಲೂ ವಿದ್ಯುನ್ಮಾನದ ಕೆಲವು ವಾಹಿನಿಗಳು ಪೌರೋಹಿತ್ಯವನ್ನು ಅಧಿಕೃತವಾಗಿ ಅಸ್ತ್ರವನ್ನಾಗಿಸಿಕೊಂಡಿವೆ. ಅದರಲ್ಲಿ ಒಂದು ಶತಮಾನದ ಇತಿಹಾಸ ಕಂಡಿರುವ ಮುದ್ರಣ ಮಾಧ್ಯಮ ನೈತಿಕ, ಸಾಮಾಜಿಕ ಪರಿಕಲ್ಪನೆಗೆ ಸ್ಪಂದಿಸುವ ಗುಣಲP್ಪ್ಷಣಗಳನ್ನು ತಕ್ಕಮಟ್ಟಿಗಾದರೂ ಪಾಲಿಸಿಕೊಂಡು ಬರುತ್ತಿದೆ. ಆದರೆ ಮಾಧ್ಯಮಗಳು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ ಕೆಲಸ ರೂಡಿಸಿಕೊಂಡಿದ್ದು ಟಿಆರ್‍ಪಿಗಾಗಿ ಅನೈತಿಕತೆಯಿಂದ ನಡೆದುಕೊಳ್ಳುತ್ತಿವೆ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರೊ.ಅರವಿಂದ ಮಾಲಗತ್ತಿಯವರು ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ರಂಗಾಯಣದ ಮಾಜಿ ನಿರ್ದೇಶಕರಾದ ಹೆಚ್.ಜನಾರ್ಧನ(ಜನ್ನಿ) ಮಾತನಾಡುತ್ತ ಸಮುದಾಯ ನನಗೆ ತಾಯಿ. ನನ್ನ ಬೆಳವಣಿಗೆಗೆ ಸಮುದಾಯ ಕಾರಣ ಎಂದು ಸಮುದಾಯದ ಹಾಡುಗಳನ್ನು ಹಾಡುವ ಮುಖಾಂತರ ಸಮುದಾಯದ ಪ್ರಸ್ತುತತೆ ಕುರಿತು ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ಪ್ರೋ.ಆರ್.ಕೆ.ಹುಡಗಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್À ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಎಸ್.ಆರ್.ರಮೇಶ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು  ಎಸ್.ದೇವೇಂದ್ರಗೌಡ ನಡೆಸಿಕೊಟ್ಟರು.

                                        ವಿಚಾರ ಸಂಕಿರಣ
                                 “ಸಾಂಸ್ಕøತಿಕ ಪ್ರತಿರೋಧದ ಮಾದರಿಗಳು”

ಸಮ್ಮೇಳನದಲ್ಲಿ ವಿಚಾರ ಸಂಕಿರಣ ಸಡೆಸಲಾಯಿತು ರಂಗಭೂಮಿಯಲ್ಲಿ ಪ್ರತಿರೋಧದ ಮಾದರಿಗಳು ಕುರಿತು ಪ್ರೊ.ಎಚ್.ಎಸ್.ಉಮೇಶ ಮಾತನಾಡುತ್ತಾ ಬ್ರೆಕ್ಟನಿಂದ ಪ್ರಭಾವಿತರಾಗಿ ಅರಂಭಿಸಿ ಬಿನ್ನ ದಾರಿಗಳನ್ನು ಹಿಡಿದ ಹಾಗೂ ಹಿಡಿಯುತ್ತಿರುವ ಮೂರು ನಾಟಕಕಾರರನ್ನು (ಎಚ್.ಎಮ್.ಚೆನ್ನಯ್ಯ,ಲಿಂಗದೇವರ ಹಳೆಮನೆ.ಪ್ರಸನ್ನ)ಪ್ರಾತಿನಿಧಿಕವಾಗಿ ತೆಗೆದುಕೊಂಡು ವಿಶ್ಲೇಷಿಸಿದರು. ಪ್ರೊ.ಶೈಲಜಾ ಅವರು ಸಂಗೀತದಲ್ಲಿ ಪ್ರತಿರೋಧಗಳ ಕುರಿತು ಮಾತನಾಡುತ್ತಾ ಕ್ಲಾಸಿಕಲ್ ಪರಂಪರೆಯ ಒಳಗೆ ಮತ್ತು ಹೊರಗಿನ ಪ್ರತಿರೋಧದ ಮಾದರಿಗಳನ್ನು ಉದಾಹರಣೆ ಸಹಿತ(ಕರ್ನಾಟಕ ಕ್ಲಾಸಿಕಲ್ ಸಂಗೀತದ ನಿಷೇದ-ಕಟ್ಟುಪಾಡುಗಳನ್ನು ಒಡೆದ ವಚನ, ಭಕ್ತಿಪಂಥ, ತತ್ವಪದ, ಪ್ರಾದೇಶಿಕ ಜಾನಪದ ಹಾಡುಗಳು)ವಿವರಿಸಿದರು. ಪ್ರೊ.ರಾಜಪ್ಪ ದಳವಾಯಿಯವರು ಸಿನಿಮಾದಲ್ಲಿ ಹೊಸ ಅಲೆಯ ಬಗ್ಗೆ ಮಾತನಾಡುತ್ತಾ ತಿಥಿ ಮುಂತಾದ ಹೊಸ ಅಲೆಯ ಸಿನಿಮಾಗಳು ಬೀರಿದ ಪರಿಣಾಮ ಮಾಧ್ಯಮದಲ್ಲೂ ಹೊಸ ಪ್ರತಿರೋಧದ ಮಾದರಿಗಳು ಹುಟ್ಟಿಕೊಳ್ಳುವಂತಹ ಅಸಕ್ತಿಕಾರಕ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೊ.ಆರ್ .ಕೆ.ಹುಡಗಿ ವಹಿಸಿದ್ದರು ಶ್ರೀಪಾಧ ಭಟ್ ಸಂಕಿರಣ ನಡೆಸಿಕೊಟ್ಟರು.

ಸಮ್ಮೇಳನದ ಕಾರ್ಯಕಲಾಪಗಳು

ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ನಡೆಸಿಕೊಡಲು ಪ್ರೊ.ಹುಡಗಿ, ಅಚ್ಯುತ, ಶ್ರೀಮತಿ ಪ್ಲೋರಾ ಇರುವ ಅಧ್ಯಕ್ಷೀಯ ಮಂಡಳಿಯನ್ನು ರಚಿಸಲಾಯಿತು. ಕಲಾಪ ದಾಖಲು, ನಿರ್ಣಯ ಮತ್ತು ಅರ್ಹತಾ ಪರಿಶೀಲನಾ ಸಮಿತಿಗಳನ್ನೂ ನೇಮಿಸಲಾಯಿತು. ಎಸ್.ದೇವೇಂದ್ರಗೌಡ ಅವರು ಮಂಡಿಸಿದ ಶ್ರದ್ಧಾಂಜಲಿ ನಿರ್ಣಯವನ್ನು ಸಮ್ಮೇಳನ ಅಂಗೀಕರಿಸಿತು.  ಪ್ರಧಾನ ಕಾರ್ಯದರ್ಶಿ ಟಿ. ಸುರೇಂದ್ರ ರಾವ್ ಹಾಗೂ ವಿಠ್ಠಲ ಭಂಡಾರಿ ಸಮ್ಮೇಳನದ ಪ್ರಮುಖ ಅಜೆಂಡಾ ಆದ ರಾಜ್ಯ ಸಮಿತಿಯ ಕರಡು ವರದಿಯನ್ನು ಚರ್ಚೆಗೆ ಮಂಡಿಸಿದರು.
ಮೊದಲ ಭಾಗ ಇಂದಿನ ಸಾಂಸ್ಕøತಿಕ ಪರಿಸ್ಥಿತಿಯ ವಿವರವಾದ ನೋಟ ಕೊಡುವಂಥದಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬರುವ ಅವಧಿಯಲ್ಲಿ ಸಮುದಾಯದ ಕರ್ತವ್ಯಗಳನ್ನೂ ಗುರುತಿಸಲಾಗಿತ್ತು. ಎರಡನೆಯ ಭಾಗ  ಸಂಘಟನಾ ಪರಿಸ್ಥಿತಿಯ ಪರಾಮರ್ಶೆ ಸಹ ಇತ್ತು. ಮೂರನೆಯ ಭಾಗದಲ್ಲಿ ಈಗಾಗಲೇ ಸಮುದಾಯದ ಘಟಕಗಳ ವಿಸ್ತರಣೆ, ಪ್ರಧಾನವಾಗಿ ಮಾಡುತ್ತಾ ಬಂದಿರುವ ರಂಗ ಚಟುವಟಿಕೆಗಳು, ವಿಚಾರ ಸಂಕಿರಣ, ಸಾಂಸ್ಕøತಿಕ ವಿದ್ಯಮಾನಗಳಿಗೆ ಸ್ಪಂದನ, ಸಾಂಸ್ಕøತಿಕ ಮಧ್ಯಪ್ರವೇಶ ಮುಂತಾದವುಗಳಲ್ಲಿ ವಿಸ್ತರಣೆ ಮತ್ತು ನಿರ್ದಿಷ್ಟ ಯೋಜನೆಯೂ ಇತ್ತು. ಹಾಗೂ ರಾಜ್ಯ ಸಮಿತಿ ಸಭೆ. ಸಭೆಯಲ್ಲಿ ಸದಸ್ಯರ ಹಾಜರಾತಿ ವಿವರ ನೀಡಲಾಗಿತ್ತು. ಆ ಮೇಲೆ ಲೆಕ್ಕಪತ್ರ ವರದಿಯನ್ನು ಖಜಾಂಚಿ ವಸಂತ್‍ರಾಜ್ ಎನ್.ಕೆ. ಮಂಡಿಸಿದರು. ಮೊದಲ ದಿನ ಸಂಜೆ ಪ್ರತಿನಿಧಿಗಳ ಗುಂಪು ರಚಿಸಿ, ಸಭೆ ಸೇರಿ ಚರ್ಚಿಸಲು ಸೂಚಿಸಲಾಯಿತು.

ವರದಿಯ ಮೇಲೆ ಚರ್ಚೆ
ಎರಡನೇ ದಿನ ಕರಡು ವರದಿಯ ಮೇಲೆ ಚರ್ಚೆ ಮುಖ್ಯ ಕಲಾಪವಾಗಿತ್ತು. 25ಕ್ಕೂ ಹೆಚ್ಚು ಪ್ರತಿನಿಧಿಗಳು ಕರಡು ವರದಿಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. ವರದಿ ಪುಷ್ಟೀಕರಿಸಲು ಸಲಹೆಗಳು, ವರದಿಯ ಬಗ್ಗೆ ವಿಮರ್ಶೆ-ಟೀಕೆ, ಬಿಟ್ಟು ಹೋಗಿರುವ ವಿಷಯಗಳನ್ನು ಸೇರಿಸಲು ಸೂಚನೆಗಳು,  ಚರ್ಚೆ ನಡೆಯಿತು.  ಈ ಚರ್ಚೆಗೆ ಉತ್ತರ ನೀಡಿದ ಪ್ರಧಾನ ಕಾರ್ಯದರ್ಶಿ ಕೆಲವು ವಿಷಯಗಳ ಬಗ್ಗೆ ಸ್ಪಷ್ಟಿಕರಣ ನೀಡಿದರು. ಕೆಲವು ಸಲಹೆ-ಸೂಚನೆಗಳನ್ನು ಅಂಗೀಕರಿಸಿದರು. ಈ ಮಾರ್ಪಾಡುಗಳೊಂದಿಗೆ ಸಮ್ಮೇಳನ ಕರಡು ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಲೆಕ್ಕಪತ್ರದ ವರದಿಯನ್ನು ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿತು. ಕರಡು ವರದಿ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಹಲವು ನಿರ್ಣಯಗಳು ಸಮ್ಮೇಳನದಲ್ಲಿ ಸೂಚಿತವಾದವು. 6 ನಿರ್ಣಯಗಳನ್ನು ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿತು. (6 ನಿರ್ಣಯಗಳಾವುವು ಎಂದು ಪ್ರತಿಯೊಂದನ್ನೂ ಒಂದು ವಾಕ್ಯದಲ್ಲಿ ಸೂಚಿಸಬೇಕು)


ನೂತನವಾಗಿ ಆಯ್ಕೆಯಾದ ಸಮುದಾಯ ರಾಜ್ಯ ಸಮಿತಿಯ ವಿವರ
ಕ್ರಮ ಸಂಖ್ಯೆ ಹುದ್ದೆ      ಹೆಸರು           ಸ್ಥಳ
1. ಅಧ್ಯಕ್ಷರು         ಅಚ್ಯುತ       ಕೆ.ಜಿ.ಎಫ್
2. ಉಪಾಧ್ಯಕ್ಷರು       ಟಿ.ಸುರೇಂದ್ರ ರಾವ್              ಬೆಂಗಳೂರು
3.    "               ವಾಸುದೇವ ಉಚ್ಚಿಲ್            ಮಂಗಳೂರು
4.    "                ಬಿ.ಐ.ಈಳಗೇರ                  ಧಾರವಾಡ
5. ಪ್ರಧಾನ ಕಾರ್ಯದರ್ಶಿ        ಎಸ್.ದೇವೇಂದ್ರ ಗೌಡ          ಸಿಂಧನೂರು
6. ಸಂಘಟನಾ ಕಾರ್ಯದರ್ಶಿ ಡಾ.ವಿಠ್ಠಲ ಭಂಡಾರಿ ಉ.ಕನ್ನಡ
7. ಸಹ ಕಾರ್ಯದರ್ಶಿ ವಿಮಲ ಕೆ.ಎಸ್  ಬೆಂಗಳೂರು
8. "                 ಉದಯ ಗಾಂವ್ಕರ್  ಕುಂದಾಪುರ
9. ಖಜಾಂಚಿ        ಎನ್.ಕೆ.ವಸಂತರಾಜ್  ಬೆಂಗಳೂರು
10. ರಾಜ್ಯ ಸಮಿತಿ ಸದಸ್ಯರು ಜನಾರ್ಧನ      ಕೆ.ಜಿ.ಎಫ್
11. " ಜಗದೀಶ ನಾಯಕ           "
12.                     “         ಶ್ರೀಮತಿ ಫ್ಲೋರಾಅಚ್ಚುತ್                      “
13. " ಎಂ.ಜಿ.ವೆಂಕಟೇಶ್      ಬೆಂಗಳೂರು
14. " ವೆಂಕಟೇಶ್ ಪ್ರಸಾದ್ ವಿ.         "
15. " ಎಂ.ಮಹೇಶ                 "
16. " ಪ್ರಕಾಶ ಕಾವರಾಡಿ      ತುಮಕೂರು
17. " ಮನೋಜ ವಾಮಂಜೂರು            ಮಂಗಳೂರು
18. " ಸದಾನಂದ ಬೈಂದೂರ                ಕುಂದಾಪುರ
19. " ಕೆ.ಪ್ರಭಾಕರನ್                ಶಿವಮೊಗ್ಗ
20. " ಡಾ.ಶ್ರೀಪಾದ ಭಟ್      ಶಿರಸಿ(ಉತ್ತರ ಕನ್ನಡ)
21. " ರಾಜಶೇಖರ ಡಿ. ಷಲವಡೆ      ರಾಮದುರ್ಗ
22. " ರಂಜಿತಾ ಜಾಧವ್              ಧಾರವಾಡ
23. " ವಿಲಾಸ್ ಶೇರಖಾನ್          "
24. " ಕರುಣಾನಿಧಿ              ಹೊಸಪೇಟೆ
25. " ಸಂದೀಪ .ಕೆ             ಗುಲ್ಬರ್ಗಾ
26.                    “           ಮೋಹನಲಾಲ್ ಜೈನ್                     ಕುಷ್ಟಗಿ
27.                  ‘’           ಬಸವರಾಜ ಕಮ್ಮಾರ                      ಹೆಚ್.ಬಿ.ಹಳ್ಳಿ
28.                 ‘’           ಮಂಜುನಾಥ ಕೆ.ವಿ.                         ಕೋಲಾರ
29.                 ‘’             ಅಮಿತ್                                         ಮಾಲೂರು


ಸಮಾರೋಪ ಸಮಾರಂಭ

ಕ್ರಾಂತಿಕಾರಕ ಚಳುವಳಿ ಅಗತ್ಯವಿದೆ
ಜಾನಪದ ತಜÐ ಪ್ರೋ.ಹಿ.ಶಿ.ರಾಮಚಂದ್ರೇಗೌಡ ಅಭಿಮತ

ಸಮಾರೋಪದಲ್ಲಿ ಮಾತನಾಡುತ್ತಾ ಜನರ ಹಿತಾಶಕ್ತಿಗಳನ್ನು ಧಾರ್ಮಿಕ ಕಟ್ಟು ಪಾಡುಗಳು ಮೂಲಕ ಬಲಿಕೊಡುವ ಪ್ರಯತ್ನವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಜನಸಾಮಾನ್ಯರಿಗೆ ತಮಗೆ ಶೋಷಣೆ ಆಗುತ್ತಿದೆ ಎಂಬ ಅರಿವು ಸಹಾ ಇರುವುದಿಲ್ಲಾ ಇಂತಹ ಸಂದರ್ಭದಲ್ಲಿ ಕಾಲಕಾಲಕ್ಕೆ ಜನರನ್ನು ಶೋಷಣೆಯಿಂದ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಅನೇಕ ಕ್ರಾಂತಿಕಾರಕ ಚಳುವಳಿಗಳು ರೂಪಗೊಂಡಿವೆ. ಈಗಿನ ಕಾಲಘಟ್ಟದಲ್ಲಿ ಇಂತಹ ಚಳುವಳಿಗಳ ಅಗತ್ಯ ಇದೆ ಮತ್ತೆ ಸಂಘಟಿತರಾಗಿ ಜನಪರ ಕಾರ್ಯಕ್ರಮ ರೂಪಿಸಬೇಕು. ಜನಪದ ಮಹಾಕಾವ್ಯಗಳಲ್ಲಿ ಕ್ರಾಂತಿಯ ಲಕ್ಷಣಗಳಿವೆ, ಶ್ರಮಿಕರ ಕೈಯಲ್ಲಿ ಆಯುಧಗಳನ್ನು ನೀಡಿ ಕ್ರಾಂತಿಗೀತೆಗಳನ್ನು ಹಾಡಿದ ಮಹಾನುಭಾವರು, ಜನಜೀವನಕ್ಕೆ ಬೇಕಾದ ಸಾಮಗ್ರಿಗಳೇ ಬದುಕಲೂ ಪೂರಕವಾಗಿವೆ. ನಾವು ಸ್ವಾಭಿಮಾನದ ಬದುಕಿಗಾಗಿ ತುಡಿಯುವ ಕೆಲಸವನ್ನು ಮಾಡಬೇಕೆಂದರು.
ಅತಿಥಿಗಳಾಗಿ ಪಿ.ಗಂಗಾಧರಸ್ವಾಮಿ ತಮ್ಮ ಸಮುದಾಯದ ಅನುಭವವನ್ನು ಹಂಚಿಕೊಂಡರು, ಸಭೆಯ ಅಧ್ಯಕ್ಷತೆಯನ್ನು ಪ್ರೊ.ಆರ್.ಕೆ.ಹುಡಗಿ ವಹಿಸಿದ್ದರು. ನೂತನ ಅಧ್ಯಕ್ಷರಾದ ಅಚ್ಚುತ್ ಪ್ರಧಾನ ಕಾರ್ಯದರ್ಶಿಎಸ್.ದೇವೇಂದ್ರಗೌಡ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ವಿಠ್ಠಲ್ ಭಂಡಾರಿ ನಡೆಸಿಕೊಟ್ಟರು. ಸಮ್ಮೇಳನಕ್ಕೆ ನೆರವಾದ ಸ್ವಯಂ ಸೇವಕರಿಗೆ ನೆನಪಿನ ಪುಸ್ತಕ ಕಾಣಿಕೆ ಅರ್ಪಿಸಲಾಯಿತು. ಸಮುದಾಯ ಗೀತೆ ‘ಎಲ್ಲಿಂದ ಬಂದಿರೆಂದು ಕೇಳಬಹುದು ನೀವು.. ..’ ಹಾಡುವುದರೊಂದಿಗೆ ಸಮ್ಮೇಳನ ಮುಕ್ತಾಯವಾಯಿತು.

ಸಮುದಾಯ ಆರನೇ ರಾಜ್ಯ ಸಮ್ಮೇಳನ ಅಂಗೀಕರಿಸಿದ ನಿರ್ಣಯಗಳು
1. ಮೌಡ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಒತ್ತಾಯ;
2. ಡಾ.ಎಂ.ಎಂ.ಕಲಬುರ್ಗಿಯವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಹಂತಕರನ್ನು  ಬಂಧಿಸಲು ಅಗ್ರಹ
3. 18 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು, ಹಾಗೂ ಶಿಕ್ಷಣದ ರಾಷ್ಟ್ರೀಕರಣಕ್ಕೆ ಒತ್ತಾಯ;
4. ಅಹಾರ, ಉಡುಪುಗಳ ನೆಪದಲ್ಲಿ ದಲಿತರ, ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಸಹಜ ಜೀವನ ವಿಧಾನದ ಮೇಲಿನ ಹಲ್ಲೆಗೆ ಖಂಡನೆ;
5. ಮಾಧ್ಯಮ ಪುರೋಹಿತಶಾಹಿ ಪ್ರವ್ಲತ್ತಿಯನ್ನು ಖಂಡಿಸಿ, ಮಾಧ್ಯಮದ ಸ್ವಾತಂತ್ರವನ್ನು ಎತ್ತಿಹಿಡಿಯಲು ಹಾಗೂ ಬದಲಿ ಮಾಧ್ಯಮವನ್ನು ರೂಪಿಸುವ ಪರವಾಗಿ;
6. ಭಾರತ ಮತ್ತು ಕರ್ನಾಟಕದ ಬಹುತ್ವವನ್ನು ಉಳಿಸಿ, ಬೆಳೆಸುತ್ತೇವೆ ಎಂದು ಪಣ ತೊಡುತ್ತಾ ಈ ಕಾರ್ಯದಲ್ಲಿ ತೊಡಗಿರುವ ಸಾಂಸ್ಕøತಿಕ, ಸಾಮಾಜಿಕ ಚಳುವಳಿಗೆ ಬೆಂಬಲಿಸಲು ಕರೆ
 
ಶುಭಕೋರಿ ಮಾತನಾಡಿದವರು:
ಮಹಂತೇಶ- ಸಿಐಟಿಯು
ಮುನೀರ್ ಕಾಟಿಪಾಳ್ಯ-ಡಿವೈಎಫ್‍ಐ
ಲೀಲಾವತಿ-ಜನವಾದಿ ಮಹಿಳಾ ಸಂಘಟನೆ
ಆರ್.ವಿ.ಆಚಾರಿ-ಇಎಂಎಸ್ ಸ್ಟಡಿ ಸರ್ಕಲ್
ಸುನಂದ-ಅಂಗನವಾಡಿ ಕಾರ್ಯಕರ್ತರ ಸಂಘಟನೆ
ಸಾಂಸ್ಕøತಿಕ ಕಾರ್ಯಕ್ರಮ

ಮೈಸೂರಿನ ಗುರುರಾಜ ಅವರ ತಂಡದಿಂದ ಬುಡಕಟ್ಟು ಮಹಾಕಾವ್ಯದ ಹಾಡುಗಾರಿಕೆ.
                                                                                            ಎಸ್..ದೇವೇಂದ್ರಗೌಡ
                                                                                            ಪ್ರಧಾನ ಕಾರ್ಯದರ್ಶಿ



No comments:

Post a Comment