Friday, 5 May 2017
Monday, 1 May 2017
ಸಹಯಾನ ಸಾಹಿತ್ಯೋತ್ಸವ-ನಾಡು ನುಡಿಯ ಪನರ್ ನಿರೂಪಣೆ: ಹೊಸ ತಲೆಮಾರು
8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ
13 ಮೇ, 2017, ಶನಿವಾರ
ಕೆರೆಕೋಣ
ಮೇ 13, 2017 ರಂದು ಶನಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಏರ್ಪಡಿಲಾಗುತ್ತಿದೆ. “ನಾಡು ನುಡಿಯ ಪುನರ್ ನಿರೂಪಣೆ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷರಾಗಿ ಖ್ಯಾತ ವಿಮರ್ಶಕರು, ಸಾಹಿತ್ಯ ಸಂಸ್ಕøತಿ ಚಿಂತಕರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಶಿವರಾಮ ಪಡಿಕಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಡಾ. ಶಿವರಾಮ ಪಡಿಕ್ಕಲ್ ಅವರು ಮೂಲತಃ ದಕ್ಷಿಣ ಕನ್ನಡದವರು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅನ್ವಯಿಕ ಭಾಷಾ ವಿಜ್ಞಾನ ಮತ್ತು ಭಾಷಾಂತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಎಂ.ಎ ವಿದ್ಯಾಭ್ಯಾಸವನ್ನು ಮಾಡಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ‘ನಾಡು ನುಡಿಯ ರೂಪಕ: ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ ಕಾದಂಬರಿಗಳು’ ಎನ್ನುವುದು ಇವರ ಮೊದಲ ಸಂಶೋಧನಾ ಗ್ರಂಥ.
ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಪದ್ಮಾಕರ್ ದಾಡೇಗಾಂವ್ಕರ್ ಅವರೊಂದಿಗೆ ಸೇರಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಪ್ರೊ. ಉದಯನಾರಾಯಣ ಸಿಂಗ್ ಜೊತೆ ಸುನೀತಿ ಕುಮಾರ್ ಚಟರ್ಜಿ; ಎ ಸೆಂಟಿನರಿ ಟ್ರಿಬ್ಯೂಟ್ ಎನ್ನುವ ಪುಸ್ತಕವನ್ನು ಸಾಹಿತ್ಯ ಅಕಾಡೆಮಿಗಾಗಿ ಹಾಗೂ ತಾರಿಖ್ ಖಾನ್ ಜೊತೆಗೆ ವಾಗರ್ಥ ಕೃತಿಯನ್ನು ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕಾಗಿ ಸಂಪಾದಿಸಿದ್ದಾರೆ.
ಅಕಾಡೆಮಿಯು ಪ್ರಕಟಿಸಿದ ಬಾರತೀಯ ಸಾಹಿತ್ಯಗಳ ಚರಿತ್ರೆಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಇಂದಿರಾಬಾಯಿಯ ಇಂಗ್ಲೀಷ್ ಅನುವಾದವನ್ನು ಸಧ್ಯದಲ್ಲೇ ಆಕ್ಸಫರ್ಡ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಲಿದೆ. ಇದನ್ನು ಇವರು ವನಮಾಲಾ ವಿಶ್ವನಾಥ ಅವರೊಂದಿಗೆ ಸೇರಿ ಭಾಷಾಂತರಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ, ಭಾಷಾಂತರ, ವಸಾಹತೋತ್ತರ ವಿಮರ್ಶೆ, ಸಾಂಸ್ಕøತಿಕ ಅಧ್ಯಯನ ವಿಷಯಗಳಲ್ಲಿ ಅಕೆಡಮಿಕ್ ಆಸಕ್ತಿ ಹೊಂದಿರುವಕಿವರು ಆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಿಗಾಗಿ ಬರೆದಿದ್ದಾರೆ.
ಇವರು ಬಿ.ಎಚ್.ಶ್ರೀಧರ ಪ್ರಶಸ್ತಿ ಮತ್ತು ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಥ ಮಹ್ವದ ಸಾಹಿತ್ಯ ಸಂಸ್ಕøತಿಯ ಚಿಂತಕರಾದ ಡಾ. ಶಿವರಾಮ ಪಡಿಕ್ಕಲ್ ಅವರು ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ.
ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಒಂದು ಸಾಂಸ್ಕøತಿಕ ಕೇಂದ್ರ ಕಟ್ಟುವ ಜವಾಬ್ದಾರಿಯ ಭಾಗವಾಗಿ ಅವರದೇ ಮನೆಯಂಗಳದಲ್ಲಿ ನಡೆಯುವ ಈ ಉತ್ಸವದಲ್ಲಿ ತಾವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ‘ಸಹಯಾನ’ದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ, ಕಾರ್ಯದರ್ಶಿ ವಿಠ್ಠಲ ಭಂಡಾರಿ, ಕೆರೆಕೋಣ, ಖಜಾಂಚಿ ಮಾಸ್ತಿ ಗೌಡ ಅವರು ವಿನಂತಿಸಿದ್ದಾರೆ.
13 ಮೇ, 2017, ಶನಿವಾರ
ಕೆರೆಕೋಣ
ಸರ್ವಾಧ್ಯಕ್ಷರಾಗಿ ಡಾ. ಶಿವರಾಮ ಪಡಿಕ್ಕಲ್
ಮೇ 13, 2017 ರಂದು ಶನಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಏರ್ಪಡಿಲಾಗುತ್ತಿದೆ. “ನಾಡು ನುಡಿಯ ಪುನರ್ ನಿರೂಪಣೆ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷರಾಗಿ ಖ್ಯಾತ ವಿಮರ್ಶಕರು, ಸಾಹಿತ್ಯ ಸಂಸ್ಕøತಿ ಚಿಂತಕರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಶಿವರಾಮ ಪಡಿಕಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಡಾ. ಶಿವರಾಮ ಪಡಿಕ್ಕಲ್ ಅವರು ಮೂಲತಃ ದಕ್ಷಿಣ ಕನ್ನಡದವರು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅನ್ವಯಿಕ ಭಾಷಾ ವಿಜ್ಞಾನ ಮತ್ತು ಭಾಷಾಂತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಎಂ.ಎ ವಿದ್ಯಾಭ್ಯಾಸವನ್ನು ಮಾಡಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ‘ನಾಡು ನುಡಿಯ ರೂಪಕ: ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ ಕಾದಂಬರಿಗಳು’ ಎನ್ನುವುದು ಇವರ ಮೊದಲ ಸಂಶೋಧನಾ ಗ್ರಂಥ.
ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಪದ್ಮಾಕರ್ ದಾಡೇಗಾಂವ್ಕರ್ ಅವರೊಂದಿಗೆ ಸೇರಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಪ್ರೊ. ಉದಯನಾರಾಯಣ ಸಿಂಗ್ ಜೊತೆ ಸುನೀತಿ ಕುಮಾರ್ ಚಟರ್ಜಿ; ಎ ಸೆಂಟಿನರಿ ಟ್ರಿಬ್ಯೂಟ್ ಎನ್ನುವ ಪುಸ್ತಕವನ್ನು ಸಾಹಿತ್ಯ ಅಕಾಡೆಮಿಗಾಗಿ ಹಾಗೂ ತಾರಿಖ್ ಖಾನ್ ಜೊತೆಗೆ ವಾಗರ್ಥ ಕೃತಿಯನ್ನು ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕಾಗಿ ಸಂಪಾದಿಸಿದ್ದಾರೆ.
ಅಕಾಡೆಮಿಯು ಪ್ರಕಟಿಸಿದ ಬಾರತೀಯ ಸಾಹಿತ್ಯಗಳ ಚರಿತ್ರೆಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಇಂದಿರಾಬಾಯಿಯ ಇಂಗ್ಲೀಷ್ ಅನುವಾದವನ್ನು ಸಧ್ಯದಲ್ಲೇ ಆಕ್ಸಫರ್ಡ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಲಿದೆ. ಇದನ್ನು ಇವರು ವನಮಾಲಾ ವಿಶ್ವನಾಥ ಅವರೊಂದಿಗೆ ಸೇರಿ ಭಾಷಾಂತರಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ, ಭಾಷಾಂತರ, ವಸಾಹತೋತ್ತರ ವಿಮರ್ಶೆ, ಸಾಂಸ್ಕøತಿಕ ಅಧ್ಯಯನ ವಿಷಯಗಳಲ್ಲಿ ಅಕೆಡಮಿಕ್ ಆಸಕ್ತಿ ಹೊಂದಿರುವಕಿವರು ಆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಿಗಾಗಿ ಬರೆದಿದ್ದಾರೆ.
ಇವರು ಬಿ.ಎಚ್.ಶ್ರೀಧರ ಪ್ರಶಸ್ತಿ ಮತ್ತು ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಥ ಮಹ್ವದ ಸಾಹಿತ್ಯ ಸಂಸ್ಕøತಿಯ ಚಿಂತಕರಾದ ಡಾ. ಶಿವರಾಮ ಪಡಿಕ್ಕಲ್ ಅವರು ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ.
ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಒಂದು ಸಾಂಸ್ಕøತಿಕ ಕೇಂದ್ರ ಕಟ್ಟುವ ಜವಾಬ್ದಾರಿಯ ಭಾಗವಾಗಿ ಅವರದೇ ಮನೆಯಂಗಳದಲ್ಲಿ ನಡೆಯುವ ಈ ಉತ್ಸವದಲ್ಲಿ ತಾವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ‘ಸಹಯಾನ’ದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ, ಕಾರ್ಯದರ್ಶಿ ವಿಠ್ಠಲ ಭಂಡಾರಿ, ಕೆರೆಕೋಣ, ಖಜಾಂಚಿ ಮಾಸ್ತಿ ಗೌಡ ಅವರು ವಿನಂತಿಸಿದ್ದಾರೆ.
Friday, 14 April 2017
ಎಪ್ರಿಲ್ 23 ರಿಂದ ಮೇ 2 ರವರೆಗೆ ರಂಗರಂಗು ರಜಾಮೇಳ
http://samudaya.kundapura.org/2017/04/rangarangu17.html
ಸಮುದಾಯವು
ಕಳೆದೈದು ವರ್ಷಗಳಿಂದಲೂ ಮಕ್ಕಳಿಗಾಗಿ ಉಚಿತ ರಜಾಮೇಳವನ್ನು ನಿಯಮಿತವಾಗಿ
ನಡೆಸುತ್ತಾ ಬಂದಿದೆ. ಮಕ್ಕಳ ರಜಾಮೇಳಗಳು
ವ್ಯಾಪಾರವಾಗಬಾರದು ಎಂಬ ಕಾಳಜಿಯಿಂದ ರಂಗರಂಗು
ರಜಾಮೇಳದಲ್ಲಿ ಭಾಗವಹಿಸುವ ಮಕ್ಕಳಿಂದ ಪ್ರವೇಶಶುಲ್ಕವಿರುವುದಿಲ್ಲ. ಮೇಳದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು
ಮತ್ತು ವಲಸೆ ಕಾರ್ಮಿಕ ವಿದ್ಯಾರ್ಥಿಗಳಿಗೆ
ಪ್ರಾಶಸ್ತ್ಯದ ಮೇಲೆ ಪ್ರವೇಶ ನೀಡಲಾಗುತ್ತದೆ.
ಈ ವರ್ಷದ ಮೇಳವು ಎಪ್ರಿಲ್
23 ರಿಂದ ಮೇ 2 ರವರೆಗೆ ನಡೆಯುತ್ತದೆ.
ಈ ರಜಾಮೇಳದಲ್ಲಿ ನೆಲಮೂಲದ
ಸಂಸ್ಕøತಿಯನ್ನು ಮಕ್ಕಳಿಗೆ ಪರಿಚಯಿಸುವ
ಉದ್ದೇಶವಿದೆ. ಮಕ್ಕಳ ಅಸಾಧಾರಣ ಕ್ರಿಯಾಶಕ್ತಿಯನ್ನು
ಉದ್ಧೀಪಿಸುವ, ಅವರ ವ್ಯಕ್ತಿತ್ವವನ್ನು ನೆಲದೊಡನೆ
ಬೆಸೆಯುವ, ಜಾತಿ-ಮತ-ಭಾಷೆಗಳ
ಹೆಸರಿನಲ್ಲಿ ನಾವು ನಿರ್ಮಿಸಿಕೊಂಡಿರುವ ಗೋಡೆಗಳನ್ನು
ಮೀರಿ ಮನುಷ್ಯತ್ವದ ವಿಶಾಲ ಕುಟುಂಬದೊಳಗೆ ಬದುಕುವದನ್ನು
ಕಲಿಯಲು ಈ ಮೇಳದಲ್ಲಿ ಒತ್ತು
ನೀಡಲಾಗುವುದು. ಮೇಳದ ಭಾಗವಾಗಿ ಮಕ್ಕಳು
ಹೊರಸಂಚಾರ, ಮಕ್ಕಳ ಸಂತೆ, ಕಛೇರಿ
ಭೇಟಿಗಳನ್ನು ಮಾಡುವರು.
ಪ್ರತಿ ವರ್ಷದಂತೆ ಮೇಳದ ಮಕ್ಕಳು ಈ
ವರ್ಷವೂ ಮೇಳದ ಸಮಾರೋಪ ಸಮಾರಂಭದಲ್ಲಿ
ನಾಟಕ ಪ್ರದರ್ಶನವನ್ನು ನೀಡಲಿರುವರು. ನಮ್ಮನ್ನಗಲಿದ ಕಲಾವಿದ, ಹಿತೈಷಿ ಭೋಜುಹಾಂಡ
ಅವರ ನೆನಪುಗಳಿಗೆ ಈ ಮೇಳವು ಋಣಿಯಾಗಿರುವುದು.
Thursday, 6 April 2017
ದಕ್ಷಿಣಾಯಣ ಕರ್ನಾಟಕ- ಇದು ನಮ್ಮ ಕಾಲದ ಕರೆ
ಗೆಳೆಯರೆ,
ಇದು ನಮ್ಮ ಕಾಲದ ಕರೆಯಾಗಿದೆ. ನಾವು ಬರಹಗಾರರು, ಕಲಾವಿದರು, ಮಾಧ್ಯಮಗಳಲ್ಲಿ ಕೆಲಸಮಾಡುವವರು, ಕ್ರಿಯಾಶೀಲರು ಎಲ್ಲರೂ ಒಂದುಗೂಡಲೇಬೇಕಾದ ಕಾಲವು ಬಂದಿದೆ. ಏಕೆಂದರೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಅದರ ಮೌಲ್ಯಗಳನ್ನು ನಾಶಪಡಿಸಿ ಫ್ಯಾಸಿಸ್ಟ್ ವ್ಯವಸ್ಥೆಯೊಂದನ್ನು ತರಲು ಹೊರಟಿರುವ ಮತ್ತು ಈ ಕೆಲಸಕ್ಕೆ ಅನುವಾಗುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನೇಕ ಪ್ರಕಾರದ ಹಿಂಸೆಗಳ ಮೂಲಕ ಹತ್ತಿಕ್ಕುವ ಉದ್ದೇಶವುಳ್ಳ ರಾಜಕೀಯ ಶಕ್ತಿಗಳು, ಪಕ್ಷಗಳು ಹಾಗೂ ಸಂಸ್ಥೆಗಳು ಇಂದು ಪ್ರಬಲಗೊಳ್ಳುತ್ತಿವೆ. ನಿಜಕ್ಕೂ ಇದು ತಲ್ಲಣಗೊಳಿಸುವಂತಿದೆ. ದಾಬೋಲ್‍ಕರ್, ಪಾನ್ಸರೆ ಮತ್ತು ಕಲಬುರ್ಗಿಯವರ ಹತ್ಯೆಗಳ ಮೂಲಕ ಚಿಂತನೆಮಾಡುವ, ಪ್ರಶ್ನೆಗಳನ್ನು ಕೇಳುವ ಹಾಗೂ ಭಿನ್ನಮತವನ್ನು ಧೈರ್ಯವಾಗಿ ಮಂಡಿಸುವ ವಿಚಾರವಂತರನ್ನೂ ಸುಮ್ಮನಾಗಿಸುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಈ ಹತ್ಯೆಗಳು ಭೀತಿಯ ಬದಲಾಗಿ ಬರಹಗಾರರಲ್ಲಿ, ವಿಚಾರವಂತರಲ್ಲಿ ಒಗ್ಗಟ್ಟು ಹಾಗೂ ಪ್ರತಿಭಟನೆಯನ್ನು ತಂದವು. ಪ್ರಶಸ್ತಿ ವಾಪಸಿಯಂತಹ ಸಾರ್ವಜನಿಕ ಪ್ರತಿರೋಧದ ಮೂಲಕ ಒಂದು ಮಹತ್ವಪೂರ್ಣ ಸಂಚಲನವು ಆರಂಭವಾಯಿತು. ಆದರೆ, ಇನ್ನೊಂದೆಡೆಗೆ ದಲಿತ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆ, ಜೆ.ಎನ್.ಯು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗಳು, ಗೋಮಾಂಸದ ನೆಪದಲ್ಲಿ ದಾದ್ರಿಯ ಅಖ್ಲಾಕ್‍ನ ಕೊಲೆ, ದೇಶದುದ್ದಕ್ಕೂ ದೈಹಿಕ ಹಲ್ಲೆಗಳು ಇವುಗಳು ತಡೆಯಿಲ್ಲದೆ ನಡೆಯುತ್ತ ಬಂದವು. ಇವು ಬಿಡಿಬಿಡಿಯಾಗಿ ನಡೆದ ಘಟನೆಗಳಾಗಿದ್ದರೂ ಅವು ಸ್ಪಷ್ಟವಾಗಿಯೇ ಒಂದು ಬಗೆಯ ಸಿದ್ಧಾಂತ, ಒಂದು ಬಗೆಯ ರಾಜಕೀಯದ ಬೆಳವಣಿಗೆಯ ಪರಿಣಾಮಗಳಾಗಿರುವುದು ಸ್ಪಷ್ಟವಾಗಿದೆ. ಇಂದು ಸಂದರ್ಭದ ವಿಶಿಷ್ಟತೆಯನ್ನು ಒಟ್ಟುಗೂಡಿಸಿ ನೋಡಿದರೆ ಈ ವಿದ್ಯಮಾನದ ಚಿತ್ರವು ಸಮಗ್ರವಾಗಿ ಕಾಣತೊಡಗುತ್ತದೆ. ಈ ವಿಶಿಷ್ಟತೆಗಳು ಹೀಗಿವೆ:
• ಕೋಮುವಾದಿ ಗಲಭೆ ಹಾಗೂ ಹಿಂಸೆಗಳ ಮೂಲಕ ದೇಶದ ಜನರನ್ನು ಒಡೆದು, ಆಕ್ರಾಮಕವಾದ ಹುಸಿ ರಾಷ್ಟ್ರವಾದದ ಮೂಲಕ ಅಪನಂಬಿಕೆ ಹಾಗೂ ದ್ವೇಷಗಳನ್ನು ಹುಟ್ಟುಹಾಕಿ ಅವುಗಳ ಮೂಲಕ ಚುನಾವಣಾ ರಾಜಕೀಯದಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಶಕ್ತಿಯು ಪ್ರಜಾಪ್ರಭುತ್ವದಿಂದ ತನಗೆ ಇರುವ ಅಪಾಯಗಳನ್ನು ಅರ್ಥಮಾಡಿಕೊಂಡಿದೆ. ಜನರು ನಿರ್ಭೀತರಾಗಿ ಚಿಂತನೆಮಾಡಿ ತಮ್ಮ ನಿಲುವುಗಳನ್ನು ಯಾವ ಭೀತಿಯು ಇಲ್ಲದೇ ಅಭಿವ್ಯಕ್ತಿಸಿ ಒಂದುಗೂಡತೊಡಗಿದರೆ ಪ್ರಜಾಪ್ರಭುತ್ವವು ಗಟ್ಟಿಗೊಳ್ಳುತ್ತದೆ. ಹಾಗೆ ಆದರೆ ಫ್ಯಾಸಿಸ್ಟ್ ರಾಜಕೀಯವು ಬೆಳೆಯಲಾಗದು.
• ಆದ್ದರಿಂದಾಗಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಚುನಾವಣ ರಾಜಕೀಯದಿಂದಾಗಿ ಅಧಿಕಾರಕ್ಕೆ ಬಂದ ಕೂಡಲೇ ಈ ಪ್ರಜಾಪ್ರಭುತ್ವದ ಜೀವಾಳವೇ ಆಗಿರುವ ಮೌಲ್ಯಗಳನ್ನು ಹಾಗೂ ಸಂಸ್ಥೆಗಳನ್ನು ನಾಶಮಾಡಲು ತೊಡಗುವುದು ಫ್ಯಾಸಿಸಮ್‍ನ ಲಕ್ಷಣವಾಗಿದೆ.
• ಅದರ ಪ್ರಮುಖ ಗುರಿಗಳೆಂದರೆ ಶಿಕ್ಷಣವಲಯ (ಅದರಲ್ಲೂ ವೈಚಾರಿಕ ಮುಂದಾಳತ್ವವನ್ನು ಕೊಡಬಲ್ಲ ವಿಶ್ವವಿದ್ಯಾನಿಲಯಗಳು), ಮಾಧ್ಯಮಗಳು, ಸರಕಾರೇತರ ನಾಗರೀಕ ಸಂಸ್ಥೆಗಳು, ವೈಚಾರಿಕ ಹಾಗೂ ಸಾಂಸ್ಕøತಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಪ್ರಮುಖವಾಗಿ ತನ್ನ ವಿರುದ್ಧ ಯಾವುದೇ ಬಗೆಯ ಪ್ರತಿಭಟನೆ ಮಾಡುವ ರಾಜಕೀಯ ಪಕ್ಷಗಳು ಹಾಗೂ ಚಳುವಳಿಗಳು.
• ಇವುಗಳನ್ನು ಗುರಿಯಾಗಿಟ್ಟುಕೊಂಡು ಅದು ಬಳಸುವ ಮುಖ್ಯ ಸಾಧನವೆಂದರೆ ಹಿಂಸೆಯ ಅನೇಕ ಬಗೆಗಳು. ಉದಾಹರಣೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಪರವಾಗಿರುವವರು ಹಾಗೂ ಬಾಡಿಗೆ ಬಂಟರ ಮೂಲಕ ಬಳಸುವ ಶಾಬ್ದಿಕ ಹಾಗೂ ಮಾನಸಿಕ ಹಿಂಸೆ, ಎರಡನೇಯದು ಬೆದರಿಕೆ. ವಿಶೇಷವಾಗಿ ವಿರೋಧಿ ದನಿಯು ಮಹಿಳೆಯರದ್ದಾಗಿದ್ದರೆ ಅವರ ಮೇಲೆ ಮಾನಭಂಗ ಮಾಡುವ ಬೆದರಿಕೆಗಳು, ಅವರನ್ನು ಅವಮಾನಗೊಳಿಸುವ ರೀತಿಯಲ್ಲಿ ಣಡಿoಟಟ ಮಾಡಲಾಗುತ್ತಿದೆ. ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಈ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯು ಇತ್ತೀಚಿನ ದಿನಗಳಲ್ಲಿ ನೇರವಾಗಿ ದೈಹಿಕ ಹತ್ಯೆಗಳಲ್ಲಿ ತೊಡಗಿದೆ. ಜೆ.ಎನ್.ಯು. ಹಾಗೂ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದ ರಾಜಮಾಸ್ ಕಾಲೇಜಿನಲ್ಲಿ ಇದನ್ನು ನೋಡಿದ್ದೇವೆ. ವಿಚಾರವಂತ ಅಧ್ಯಾಪಕರು, ಬರಹಗಾರರ ಮೇಲೆ ರಾಷ್ಟ್ರದ್ರೋಹ ಮುಂತಾದ ಕೇಸುಗಳನ್ನು ಹಾಕುವುದು, ಅವರ ಕಾರ್ಯಕ್ರಮಗಳನ್ನು ರದ್ದು ಮಾಡುವುದು, ಅವರನ್ನು ಆಹ್ವಾನಿಸಿದವರನ್ನು ಪೀಡಿಸುವುದು ಇದು ಇನ್ನೊಂದು ಬಗೆಯ ಹಿಂಸೆ.
• ಇದಕ್ಕೆ ಬೆಂಬಲವಾಗುವ ರೀತಿಯಲ್ಲಿ ಕೋಮುವಾದಿ, ಹುಸಿ ರಾಷ್ಟ್ರವಾದಿ, ಸ್ತ್ರೀ ಹಾಗೂ ದಲಿತ ವಿರೋಧಿ ಸಿದ್ಧಾಂತಗಳನ್ನು ನಾಗರೀಕ ಸಮಾಜದಲ್ಲಿ ವ್ಯವಸ್ಥಿತವಾಗಿ ಹರಿಬಿಡಲಾಗುತ್ತಿದೆ. ಇಂಥ ದುಷ್ಟ ಚಿಂತನೆಗಳನ್ನು ನಮ್ಮ ಜನರ common
sense ಆಗಿ ಪರಿವರ್ತಿಸುವ ಯಶಸ್ವಿ ಪ್ರಯೋಗಗಳು ನಡೆಯುತ್ತಿವೆ.ಇವೆಲ್ಲವುಗಳನ್ನು ನೋಡಿದರೆ ನಮ್ಮ ಕಾಲದ ಗೋಡೆಯ ಮೇಲಿನ ಬರಹವು ಅತಿ ಸ್ಪಷ್ಟವಾಗಿದೆ. ಫ್ಯಾಸಿಜಮ್ ಅಂದರೆ ಏನು ಎನ್ನುವ ಚರ್ಚೆ ಆರಂಭವಾಗುವ ಮೊದಲೇ ಅದು ಸಾಂಸ್ಥಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಪ್ರಬಲವಾಗಿ ಬೆಳೆಯುತ್ತಿದೆ. ಈ ಸನ್ನಿವೇಶದಲ್ಲಿ ನಾವೆಲ್ಲ ಒಂದುಗೂಡದಿದ್ದರೆ ನಮಗೆ ಉಳಿಗಾಲವಿಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಆದ್ದರಿಂದ ಇದು ಒಂದು ರೀತಿಯಲ್ಲಿ ಕೊನೆಯ ಹೋರಾಟವೂ ಹೌದು. ಕೊನೆಯಿಲ್ಲದ ಹೋರಾಟವೂ ಹೌದು. ಘೋಷಣೆಯ ಶೈಲಿಯಲ್ಲಿ ಈ ಮಾತುಗಳನ್ನು ಹೇಳಬೇಕಾಗಿ ಬಂದಿರುವುದು ನಮ್ಮ ಕಾಲದ ಅನಿವಾರ್ಯತೆಯಾಗಿದೆ.
ಈಗ ನಾವು ಮಾಡಬೇಕಾಗಿರುವುದು ಏನು? ಫ್ಯಾಸಿಜಮ್ ವಿರುದ್ಧವಿಡುವ, ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ನಂಬಿಕೆ ಇರುವ ಎಲ್ಲಾ ಬರಹಗಾರರು, ಕಲಾವಿದರು, ಕ್ರಿಯಾಶೀಲರು, ಮಾಧ್ಯಮದವರು ಒಂದುಗೂಡೋಣ. ನಾವು ಅನೇಕ ಸಂಘಟನೆಗಳಿಗೆ ಸೇರಿರಬಹುದು. ರಾಜಕೀಯ ಪಕ್ಷಗಳ ಸದಸ್ಯರಾಗಿರಬಹುದು ಅಥವಾ ಬೆಂಬಲಿಗರಾಗಿರಬಹುದು. ಈಗಾಗಲೇ ಅರ್ಥಪೂರ್ಣವಾಗಿ ನಡೆಯುತ್ತಿರುವ ಚಳುವಳಿಗಳಲ್ಲಿ ಭಾಗಿಯಾಗಿರಬಹುದು. ಇದಾವುದನ್ನೂ ಬಿಟ್ಟುಕೊಡದೇ ಫ್ಯಾಸಿಜಮ್‍ನ ವಿರುದ್ಧ ಪ್ರಜಾಪ್ರಭುತ್ವವಾದಿ ಹೋರಾಟಕ್ಕಾಗಿ ದಕ್ಷಿಣಾಯಣದ ಹೆಸರಲ್ಲಿ ಒಂದುಗೂಡೋಣ. ದಕ್ಷಿಣಾಯಣ ಏಕೆ ಎಂದರೆ ಅದು ಒಂದು ಸಂಸ್ಥೆಯಲ್ಲ. ಸಂಘಟನೆಯಲ್ಲ. ಅದು ಫ್ಯಾಸಿಜಮ್ ವಿರುದ್ಧ ಪ್ರಜಾಪ್ರಭುತ್ವದ ಪರವಾಗಿರುವ, ಅಭಿವ್ಯಕ್ತಿ ಸ್ವಾತಂತ್ರವನ್ನು ಉಳಿಸ ಬಯಸುವ ಬರಹಗಾರ, ಕಲಾವಿದರ ಒಂದು ಚಳುವಳಿ ಮಾತ್ರ. ಇದರಲ್ಲಿ ಈಗಾಗಲೇ ಭಾರತದ ಅನೇಕ ಭಾಷೆಗಳ ಬರಹಗಾರರು ಸೇರಿಕೊಂಡು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದರ ಬಗ್ಗೆ ದೇಶದ ಪ್ರಮುಖ ಬರಹಗಾರರು, ಚಿಂತಕರು ಆಗಿರುವ ಶ್ರೀ ಗಣೇಶ್ ದೇವಿಯವರ ಟಿಪ್ಪಣಿಯನ್ನು ನೋಡಿ.
ಜನಪರ ಚಳುವಳಿಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಕನ್ನಡದ ಬರಹಗಾರರು ಕಲಾವಿದರು ಕ್ರಿಯಾಶೀಲರು ಸೇರಿ ದಕ್ಷಿಣಾಯಣ ಕರ್ನಾಟಕದ ಹೆಸರಿನಲ್ಲಿ ಒಂದುಗೂಡಬೇಕಿದೆ. ಅದಕ್ಕಾಗಿ ಏಪ್ರಿಲ್ 8 ರಂದು ಶಿವಮೊಗ್ಗದಲ್ಲಿ ಸಮಾವೇಶವನ್ನು ಏರ್ಪಡಿಸುತ್ತಿದ್ದೇವೆ. ಇದು ವಿಚಾರಸಂಕಿರಣವಲ್ಲ; ಅತಿಥಿಗಳೂ ಇರುವುದಿಲ್ಲ. ಇದು ಒಂದು ಸಹಚಿಂತನೆ ಹಾಗೂ ಸಮಾಲೋಚನೆಯ ಸ್ವರೂಪದ್ದು. ನಾವು ತುರ್ತಾಗಿ, ಅಗತ್ಯವಾಗಿ ನಮ್ಮೆಲ್ಲ ಶಕ್ತಿಗಳನ್ನು ಬಳಸಿಕೊಂಡು ಮಾಡಬೇಕಾದುದರ ಬಗ್ಗೆ ಸ್ಪಷ್ಟತೆ ಪಡೆದುಕೊಂಡು ಮಾಡಬೇಕಾದ ಕೆಲಸಗಳನ್ನು ಆರಂಭಿಸಲು ಒಂದು ವೇದಿಕೆ. ದಯವಿಟ್ಟು ಬನ್ನಿ. ಈ ಟಿಪ್ಪಣಿ ಮತ್ತು ಗಣೇಶ್ ದೇವಿಯವರ ಟಿಪ್ಪಣಿಗಳನ್ನು ಕಳಿಸಿದ್ದೇವೆ. ನಾವು ಅಂದುಕೊಂಡಿದ್ದುದು ಸರಿಯೆನಿಸಿದರೆ, ನೀವು ಸಹಭಾಗಿಯಾಗಬೇಕೆನಿಸಿದರೆ ನಮಗೆ ಬರೆಯಿರಿ.email ಮಾಡಿ.
ರಾಜೇಂದ್ರ ಚೆನ್ನಿ
ಸಂಪರ್ಕಕ್ಕಾಗಿ:
ರಾಜೇಂದ್ರ ಚೆನ್ನಿ, ಇಂಗ್ಲಿಷ್ ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ- 577 451
email: rajendrachenni@gmail.com
mobile: 9449553349
http://samudayakarnataka.blogspot.in/2017/04/dakshinayana-note-from-prof-ganesh-devy.html
Dakshinayana- A Note from Prof. Ganesh Devy
Dakshinayana-- a unique
movement of thinkers, writers, artists, film-makers and cultural activists--
has now spread to several states such as Gujarat, Maharashtra, Goa, Punjab,
West Bengal, Madhya Pradesh, Uttar Pradesh, Jammu & Kashmir, and our
own Karnataka. So far about 15000 individuals have participated in various
Dakshinayana activities in numerous locations throughout these states.
These activities range from publication of books and magazines, performance of
plays, screening of films, public meetings, protest-meetings, demonstrations,
discussions, lectures, engaging with school children, young people and
those who feel intimidated by threats. Dakshinayana is fast emerging as a
unique resistance movement and has started catching attention of media in and
outside India.
Dakshinayana is not
aligned with any political party, nor will it ever participate in electoral
politics. It is a movement to defend the freedom of expression, human dignity,
the democratic structure of Indian polity and the great cultural diversity that
makes our civilisation what it is. It is a movement towards creating a
humane, just and equal society; and towards that end, it rejects discrimination
of all kinds.
Dakshinayana is a
movement to uphold Imagination, rather than fractured memories. It is a forward
looking movement rather than any acrimonious debate on perceptions of
historical wrongs.
Dakshinayana is a
movement that values the imaginative, the feminine, the fragile and vulnerable
and defends their right to exist and assert.
It believes that we
belong to the earth and not that the earth belongs to us.
Dakshinayana is being
built on the foundation of the long tradition of profound and egalitarian
thought in Indian traditions. Karnataka has a rich tradition of such thought.
It is time to bring back the glory of Karnataka as a forward looking and humane
society where everyone is valued for being what one is, irrespective of caste,
creed, credo.
I am glad that
Dhakashinayana Karnataka is making a rapid progress under the able leadership
of Prof. Rajendra Chenni and Prof. Rahmat Tarikere.
I am convinced that
Karnataka indeed brings a ray of hope for India.
My salutes to this great
land of philosophy, arts and action. All my good wishes to every
participant in Dakshinayana
Ganesh Devy Dharwad
National Convener, Dakshinayana
Thursday, 30 March 2017
ಭಾಸ್ಕರ ಗೌಡರಿಗೆ ‘ಸಹಯಾನ ಸಮ್ಮಾನ’ ಪ್ರದಾನ..
ಪರದೆಯ ಹಿಂದೆ ದುಡಿದ ಕಲಾವಿದರೊಬ್ಬರಿಗೆ ಸನ್ಮಾನ ನೀಡಿರುವುದು ಮಹತ್ವದ್ದಾಗಿದೆ- ಕಪ್ಪೆಕೆರೆ ಭಾಗವತರು.
“ಯಕ್ಷಗಾನ ಇಂದು ಹಲವು ಬದಲಾವಣೆ ಕಾಣುತ್ತಿದೆ. ಈಗ ಯಕ್ಷಗಾನ ಅತಿ ತ್ವರಿತಗತಿಯಲ್ಲಿದೆ. ಭಾವನೆ ಬೇಡ, ಅಭಿನಯ ಬೇಡ, ಭಾವನಾತ್ಮಕ ಮಾತು ಬೇಡ, ಔಚಿತ್ಯಪೂರ್ಣ ಪಾತ್ರ ಚಿತ್ರಣ ಬೇಡ ಎನ್ನುವಂತಾಗಿದೆ. ಯಾರು ಮಂಡಿ ಹಾಕುತ್ತಾರೋ, ಕುಪ್ಪಳಿಸುತ್ತಾರೋ ಅವರೇ ದೊಡ್ಡ ಕಲಾವಿದರು ಎನ್ನಿಸಿಕೊಳ್ಳುತ್ತಿದ್ದಾರೆ. ಒಂದು ಪ್ರಸಂಗವನ್ನು ರಾತ್ರಿಯಿಡೀ ವಿವರವಾಗಿ, ಸೂಕ್ಷ್ಮವಾಗಿ ಆಡುತ್ತಿದ್ದ ಕಾಲ ಇತ್ತು. ಇಂದು 4-5 ಪ್ರಸಂಗಗಳನ್ನು ಒಂದೇ ರಾತ್ರಿ ಆಡಿ ಮುಗಿಸುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಕಲಾವಿದನಾಗಲೀ ಹಿಮ್ಮೇಳದವರಾಗಲೀ ಪ್ರೇಕ್ಷಕರಿಗೆ ಏನನ್ನು ಕೊಡಲು ಸಾಧ್ಯ? ಹಿಂದೆ ಒಂದು ಪದ್ಯಕ್ಕೆ ಇಂತಿಷ್ಟೇ ಕುಣಿತ, ಹಿತಮಿತವಾದ ಮಾತು ಅಭಿನಯಕ್ಕೆ ಆದ್ಯತೆ ಭಾಷೆಯ ಸ್ವರಾಘಾತವನ್ನೂ ಒಳಗೊಂಡಂತೆ ಶಬ್ದೋಚ್ಛಾರಕ್ಕೆ ಮಾನ್ಯತೆ ಇತ್ತು. ಈಗ ಅದ್ಯಾವುದೂ ಇಲ್ಲ. ಯಕ್ಷಗಾನದ ನಿಜವಾದ ಆಸಕ್ತರು ಇದರಿಂದ ದೂರವಾಗುತ್ತಿದ್ದಾರೆ.” ಎಂದು ಹಿರಿಯ ಭಾಗವತರು, ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕøತರೂ ಆದ ಕಪ್ಪೆರೆಕೆ ಸುಬ್ರಾಯ ಭಾಗವತರು ಹೇಳಿದರು. ಅವರು ಕೆರೆಕೋಣದ ಆರ್.ವಿ.ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ ಸಹಯಾನದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ, ಮತ್ತು ಕನ್ನಡ ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಹೆಸರಾಂತ ಯಕ್ಷಗಾನ ಕಲಾವಿದರೂ ಶಿಕ್ಷಕರೂ ಆದ ದಿ. ಜಿ.ಎಸ್. ಭಟ್ ನೆನಪಿನಲ್ಲಿ ಪ್ರತಿ ವರ್ಷ ನೀಡುವ 5000-00 ರೂ ಹಮ್ಮಿಣಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡ ಸಹಯಾನ ಸಮ್ಮಾನವನ್ನು ಯಕ್ಷಗಾನದ ವೇಷಭೂಷಣ ಮತ್ತು ಪ್ರಸಾದನ ಕಲಾವಿದ ಭಾಸ್ಕರ ಗೌಡ, ಆಡುಕುಳ ಇವರಿಗೆ ನೀಡಿ ಮಾತನಾಡುತ್ತಿದ್ದರು.
ಮುಂದುವರಿದು “ನಾನು ಬಾಲ್ಯದಲ್ಲಿ ಯಾರೊಡನೆ ಬೆರೆತೆನೋ ಯಾರಿಂದ ರಂಗಕ್ಕೆ, ಕತೆಗೆ ಬೇಕಾದ ಮೌಲ್ಯಗಳನ್ನು ತಿಳಿದುಕೊಂಡೆನೋ ಅಂತಹ ಆರ್.ವಿ.ಭಂಡಾರಿ ಮತ್ತು ಜಿ.ಎಸ್.ಭಟ್ ಧಾರೇಶ್ವರ ಇವರ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿಯ ಸಂಗತಿ. ಇವರಿಬ್ಬರೊಂದಿಗೆ ನಾನು ನನ್ನ 22 ನೇ ವಯಸ್ಸಿನಿಂದ ಸ್ನೇಹ ಗಳಿಸಿದ್ದೇನೆ. ಒಡನಾಡಿಯಾಗಿದ್ದೇನೆ. ಜಿ. ಎಸ್ ಭಟ್ ಅವರ ಹಲವು ನಾಯಕ, ಪ್ರತಿ ನಾಯಕ ಪಾತ್ರವನ್ನು ರಂಗದ ಮೇಲೆ ಕುಣಿಸಿದ್ದೇನೆ. ಹಿತಮಿತವಾದ ಕುಣಿತ, ಮಾತು, ಯಕ್ಷಗಾನಕ್ಕೆ ಒಗ್ಗುವ ದೇಹಸಿರಿ ನನಗೆ ಈಗಲೂ ನೆನಪಿನಲ್ಲಿದೆ. ಆರ್. ವಿ. ಭಂಡಾರಿಯವರಂತೆ ಕರ್ಣನ ಪಾತ್ರ ಕಟ್ಟಿಕೊಡುವವರು ಯಾರೂ ಇರಲಿಲ್ಲ. ಅದ್ಭುತ ಕಂಠ ಸಿರಿ ಅವರದು. ಪೌರಾಣಿಕ ಕತೆಯನ್ನು ಈಗಿನ ಹೊಸತನ ಸೇರಿಸಿ ಪಾತ್ರದ ಔಚಿತ್ಯಕ್ಕೆ ಚ್ಯುತಿ ಬರದಂತೆ ಜನಮೆಚ್ಚುಗೆ ಗಳಿಸಿದವರು. ದಿವಂಗತ ಜಿ. ಎಸ್. ಭಟ್ ಮತ್ತು ಆರ್. ವಿ. ಭಂಡಾರಿಯವರಲ್ಲಿ ಮಾತ್ರವಲ್ಲದೇ ಇಂದು ಸನ್ಮಾನ ಸ್ವೀಕರಿಸುತ್ತಿರುವ ಭಾಸ್ಕರ ಗೌಡರಲ್ಲಿಯೂ ಯಕ್ಷಗಾನದ ಪ್ರೀತಿ ಬದ್ಧತೆ, ಕಲ್ಮಶ ರಹಿತ ಪ್ರಾಮಾಣಿಕ ಮನೋಭಾವ ಇದೆ. ಎಲ್ಲರೂ ಹಿಮ್ಮೇಳ-ಮುಮ್ಮೇಳದವರಿಗೆ ಸನ್ಮಾನ ಮಾಡುತ್ತಾರೆ. ಆದರೆ ಪರದೆಯ ಹಿಂದೆ 40-45 ವರ್ಷಗಳ ಕಾಲ ದುಡಿದ ವೇಷಭೂಷಣ ಕಲಾವಿದರೊಬ್ಬರಿಗೆ ಸನ್ಮಾನ ನೀಡಿರುವುದು ಮಹತ್ವದ್ದಾಗಿದೆ. ವಸ್ತ್ರ ವಿನ್ಯಾಸ ನೋಡಿದೊಡನೆ ಆ ಪಾತ್ರ ಯಾವುದು ಎಂದು ಗುರುತಿಸುವ ರೀತಿಯಲ್ಲಿ (ಪ್ರತಿಯೊಂದು ಪಾತ್ರಕ್ಕೆ ಪ್ರತ್ಯೇಕ ವಸ್ತ್ರ ವಿನ್ಯಾಸ) ವೇಷ ಭೂಷಣ ಮತ್ತು ವಸ್ತ್ರ ವಿನ್ಯಾಸ ಮಾಡಿದರೆ ಭಾಸ್ಕರ ಗೌಡರವರು ಯಕ್ಷಗಾನದ ಚರಿತ್ರೆಯಲ್ಲಿ ಮೊದಲಿಗರಾಗಿ ಉಳಿಯುತ್ತಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಸಿಗಲಿ” ಎಂದು ಅವರಿಗೆ ಶುಭ ಹಾರೈಸಿದರು.
ಅಕಾಡೆಮಿ ಪ್ರಶಸ್ತಿ ಪಡೆದ ಸುಬ್ರಾಯ ಭಾಗವತರನ್ನು ಸಹಯಾನದ ಪರವಾಗಿ ವಿಷ್ಣು ನಾಯ್ಕ ಮತ್ತು ಇಂದಿರಾ ಭಂಡಾರಿ ಶಾಲು ಹೊದೆಸಿ ಅಭಿನಂಧಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಸ್ಕರ ಗೌಡರವರು “ಹಿಂದೆ ತಲೆಯ ಮೇಲೆ ಪೆಟ್ಟಿಗೆ ಹೊತ್ತುಕೊಂಡು ಹೋಗುವ ಕಾಲದಿಂದ ಈವರೆಗೆ ನಾನು ಶ್ರದ್ಧೆಯಿಂದ ಈ ಕೆಲಸ ಮಾಡಿದ್ದೇನೆ. ರಾತ್ರಿಯಲ್ಲಿ ಮುವತ್ತು ನಲವತ್ತು ಪಾತ್ರಗಳಿಗೆ ಬಣ್ಣ ಹಚ್ಚಿದ್ದಿದೆ. ಮಕ್ಕಳಿಗೂ ಅವರವರ ದೇಹ ರಚನೆಗೆ ಅನುಗುಣವಾಗಿ ವಸ್ತ್ರ ವಿನ್ಯಾಸ ಮಾಡಿದ್ದಿದೆ. ಈ ಕೆಲಸವನ್ನು ಸುಮಾರು 45 ವರ್ಷಗಲಿಂದ ಮುಂದುವರೆಸುತ್ತಲೆ ಬಂದಿದ್ದೇನೆ.” ಎಂದರು.
ಭಾಸ್ಕರ ಗೌಡರ ಕುರಿತು ಕಲಾವಿದ ಗಣೇಶ ಭಂಡಾರಿ ಅಭಿನಂದನಾ ಮಾತುಗಳನ್ನಾಡಿದರು. ಉದಯ ಜಿ. ಭಟ್ ಉಪಸ್ಥಿರಿದ್ದು ಮಾತನಾಡಿದರು. ಸಹಯಾನದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತನ್ನ ಬಾಲ್ಯದಲ್ಲಿ ಯಕ್ಷಗಾನ ವೇಷವನ್ನು ನಿರ್ವಹಿಸಿದ ಪರಿಯನ್ನು ನೆನಪಿಸಿಕೊಂಡರು. ಚಿಂತನ ರಂಗ ಅಧ್ಯಯನ ಕೇಂದ್ರದ ಕಿರಣ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ ನಾಯ್ಕ ವಂದಿಸಿದರು. ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ವಿಶ್ವರಂಗಭೂಮಿ ದಿನದ ಭಾಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಂಜುಳಾ ಸುಬ್ರಹ್ಮಣ್ಯ ಅವರ ಅಭಿನಯದ “ರಾಧಾ” ನಾಟಕ ಅಭಿನಯಿಸಲ್ಪಟ್ಟಿತು. ಸುಧಾ ಆಡುಕಳ ಅವರು ರಚಿಸಿದ ನಾಟಕವನ್ನು ಡಾ. ಶ್ರೀಪಾದ ಭಟ್ ಅವರು ನಿರ್ದೇಶಿಸಿದ್ದರು. ವಿದ್ಯಾಧರ ಕಟತೋಕ ಅವರು ಸ್ವಾಗತಿಸಿದರೆ ಮಾಧವಿ ಭಂಡಾರಿ ನೆನಪಿನ ಕಾಣಿಕೆ ಕೊಟ್ಟು ವÀಂದಿಸಿದರು.
Wednesday, 29 March 2017
ಜ್ಞಾನವು ಪ್ರಭುತ್ವದ ಹಂಗಿನಲ್ಲಿದೆ- ಜಿ. ರಾಜಶೇಖರ
ಬೆಳಕು
ವಿಶ್ವರಂಗಭೂಮಿ ದಿನಾಚರಣೆ
ಕಥಾರಂಗ
ಪಾಷಂಡಿಯ ಕೋಟು
ಕವಿಯಾಗಿ, ನಾಟಕಕಾರನಾಗಿ ಪ್ರಸಿದ್ಧರಾಗಿರುವ ಬರ್ಟೋಲ್ಟ್ ಬ್ರೆಕ್ಟ್ ಅನೇಕ ಸಣ್ಣ ಕತೆಗಳನ್ನೂ ಬರೆದಿದ್ದಾರೆ. ಪಾಷಂಡಿಯ ಕೋಟು ಅವರ ಒಂದು ಸಣ್ಣ ಕತೆ. ಪ್ರಕಾಂಡ ಪಂಡಿತ, ವಿಜ್ಞಾನಿ ಜೋರ್ಡೋನೋ ಬ್ರೂನೋ ಪಾಷಂಡವಾದಿಯೆಂದು ತೀರ್ಮಾನಿಸಿ ರೋಮೊನ ಇನಕ್ವಿಸಿಷನ್ ನ್ಯಾಯಾಲಯ ಅವರಿಗೆ ಮರಣದಂಡನೆಯನ್ನು ವಿಧಿಸುತ್ತದೆ. ಬ್ರೂನೋ ಸುಡುಗಂಬವನ್ನೇರುವ ಮೊದಲು ದೀರ್ಘಕಾಲದವರೆಗೆ ವಿಚಾರಣೆಯನ್ನೆದುರಿಸಬೇಕಾಗುತ್ತದೆ. ವಿಚಾರಣಾದೀನ ಖೈದಿಯಾಗುವ ಮುಂಚೆಯೇ ಬ್ರೂನೋ ಹೊಲಿಸಲು ಕೊಟ್ಟಿದ್ದ ಕೋಟಿನ ಬಾಬ್ತನ್ನು ಅವರಿಂದ ಪಡೆಯಲು ದರ್ಜಿ ಮೊಂಟೋವಿನ ಹೆಂಡತಿ ಮತ್ತು ಆ ಹಣವನ್ನು ಹಿಂದಿರುಗಿಸಲು ಬ್ರೂನೋ ಮಾಡುವ ಮನುಷ್ಯ ಪ್ರಯತ್ನಗಳನ್ನು ಬ್ರೆಕ್ಟ್ ಧರ್ಮಬೀರುಗಳ ಖಾಲಿತನದÀ ಹಿನ್ನೆಲೆಯಲ್ಲಿ ನಮ್ಮೆದುರು ಹಿಡಿಯುತ್ತಾರೆ. ಈ ಪುಟ್ಟ ಕತೆಯನ್ನು ನಿರ್ದೇಶಕ ವಾಸುದೇವ ಗಂಗೇರ ಯಕ್ಷಗಾನದ ಅರ್ಥಗಾರಿಕೆ, ಭಾಗವತಿಕೆಯ ವಿಶಿಷ್ಟ ಸ್ವರಸಂಚಾರವನ್ನು ಬಳಸಿಕೊಂಡು ನಟರಿಂದ ಓದಿಸುತ್ತಾರೆ. ಅಲ್ಲಲ್ಲಿ ಆಡುವಂತೆ, ಹಾಡುವಂತೆ ಮಾಡುತ್ತಾರೆ. ರಂಗಚಲನೆಗಳನ್ನು ಬಳಸಿಕೊಂಡು ದೃಶ್ಯಗಳನ್ನು ಸೃಷ್ಟಿಸುತ್ತಾರೆ. ಕುಂದಾಪುರ ಸಮುದಾಯ ಪ್ರತಿತಿಂಗಳೂ ನಡೆಸುತ್ತಾ ಬಂದಿರುವ ಕಥಾಓದು ಕಾರ್ಯಕ್ರಮಕ್ಕೆ ಈ ಚಿಕ್ಕ ಪ್ರದರ್ಶನದ ಮೂಲಕ ಹೊಸದೊಂದು ಆಯಾಮವನ್ನು ನಿರ್ದೇಶಕರು ನೀಡಿದ್ದಾರೆ. ರಂಗದ ಮೇಲೆ ವೆಂಕಟರಮಣ ನಾಯಕ, ಶಂಕರ ಆನಗಳ್ಳಿ, ಸಂಜೀವ ಹೊಸಾಡು, ಸಂಧ್ಯಾ ನಾಯಕ, ಚೈತ್ರಾ ಎಂ, ಉದಯ ಗಾಂವಕಾರ. ಧನ್ಯಾ, ಅಜಾದ ಬೈಂದೂರ್, ಹಿತೇಶ್ ಕತೆಯನ್ನು ನೋಡುಗರಿಗೆ ದಾಟಿಸುವಲ್ಲಿ ಸಫಲರಾಗಿದ್ದಾರೆ. ಬಾಲಕೃಷ್ಣ ಎಂ ಇವರ ರಂಗಸಜ್ಜಿಕೆ, ಜಿ.ವಿ ಕಾರಂತ, ನಿಶಾಂತ್, ಸುಧಾಕರ ಕಾಂಚನ್ ಇವರ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಕತೆಯೊಂದಿಗೆ ಚಲಿಸುವಂತೆ ಮಾಡುವಲ್ಲ್ಲಿ ನೆರವಾಗಿದೆ. ಇದೊಂದು ಪ್ರಯೋಗವಷ್ಟೇ ಎಂದು ನಿರ್ದೇಶಕರು ಮೊದಲೇ ಹೇಳಿದ್ದರೂ ಆನಂತರದಲ್ಲಿ ಇದೊಂದು ಉತ್ತಮ ಪ್ರಯೋಗ ಎಂಬುದು ಸಾಬೀತಾಯಿತು.
ನಿರ್ದೇಶಕ ವಾಸುದೇವ ಗಂಗೇರ
ಸಮುದಾಯದ ಮೂಲಕವೇ ರಂಗಭೂಮಿಯ ಆಸಕ್ತಿಯನ್ನು ಬೆಳಸಿಕೊಂಡ ವಾಸುದೇವ ಗಂಗೇರ ನಿನಾಸಮ್ ನಲ್ಲಿ ರಂಗಶಿಕ್ಷಣ ಪಡೆದವರು. ರಂಗಾಯಣದಲ್ಲಿ ನಟನಾಗಿ, ನಿರ್ದೇಶಕನಾಗಿ ಅನುಭವ ಗಳಿಸಿಕೊಂಡವರು. ನಡಿನ ಬೇರೆ ಬೇರೆ ರಂಗತಂಡಗಳಿಗೆ ನಿರ್ದೇಶನ ಮಾಡಿದ ಹೆಮ್ಮೆ ಇವರದು. ಧಾರವಾಡ ಸಮುದಾಯಕ್ಕಾಗಿ ವಾಸುದೇವರು ನಿರ್ದೇಶಿಸಿದ ಬುದ್ಧ ಪ್ರಬುದ್ಧ, ಕುಂದಾಪುರ ಸಮುದಾಯಕ್ಕೆ ನಿರ್ದೇಶಿಸಿದ ಕುಲಂ, ಸುಲ್ತಾನ್ ಟಿಪ್ಪು ಅಪಾರ ಜನಮನ್ನಣೆ ಗಳಿಸಿವೆ. ಮಕ್ಕಳಿಗಾಗಿ ಕುಂದಾಪುರ ಸಮುದಾಯವು ಸಂಘಟಿಸುವ ರಜಾಮೇಳದಲ್ಲಿ ವಾಸುದೇವ ಗಂಗೇರ ಪ್ರತಿವರ್ಷವೂ ಒಂದು ಮಕ್ಕಳ ನಾಟಕವನ್ನಾಡಿಸುತ್ತಾರೆ. ಕಥಾರಂಗ ವಾಸುದೇವರ ಪ್ರತಿಭೆಯನ್ನು ಮತ್ತೊಮ್ಮೆ ಸಬೀತುಪಡಿಸಿದೆ.
ಜಿ. ರಾಜಶೇಖರ
ಜಿ . ರಾಜಶೇಖರ ನಮ್ಮ ನಡುವಿನ ಪ್ರಭಾವಶಾಲಿ ಚಿಂತಕರು ಮತ್ತು ಪ್ರಖರ ವಿಮರ್ಶಕರು . ತಮ್ಮ ನುಡಿಯಲ್ಲಿರುವ ನಿಷ್ಠುರತೆಯನ್ನು ನಡೆಯಲ್ಲಿಯೂ ರೂಢಿಸಿಕೊಂಡವರು . ರಷ್ಯಾದಲ್ಲಿ ಕಮುನಿಷ್ಟರಿಂದಾದ ನರಮೇಧವನ್ನೂ, ಇಂದಿರಾ ಹತ್ಯೆಯ ನಂತರದ ಸಿಖ್ ಹತ್ಯಾಕಾಂಡವನ್ನೂ ಖಂಡಿಸಿದ ದನಿಯಲ್ಲೇ ಆನಂತರದಲ್ಲಿ ಗುಜರಾತನಲ್ಲಾದ ಹಿಂಸಾಚಾರವನ್ನು ಖಂಡಿಸಿದ್ದವರು . ಅಡಿಗರ ಕಾವ್ಯದ ಪ್ರತಿಗಾಮಿತನವನ್ನು ತಿರಸ್ಕರಿಸುತ್ತಲೇ ಅದರ ಹೊರತಾದ ಕಾವ್ಯದ ನಿಜವಾದ ಸತ್ವವನ್ನು ತೋರಿಸಿಕೊಡಬಲ್ಲರು . ಅವರ ಬಗ್ಗೆ ಲಂಕೇಶ್ ಹೀಗೆ ಹೇಳುತ್ತಾರೆ "ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ . ನಿಷ್ಟುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡವರೆಂದರೆ, ಅವರು ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ . "
ಇವರ ಬಿಡಿ ಲೇಖನಗಳ ಸಂಗ್ರಹ ವನ್ನು 'ಬಹುವಚನ ಭಾರತ' ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಅಭಿನವ ಪ್ರಕಾಶನ ಹೊರತಂದಿದೆ . ತಮ್ಮ ಅಪಾರ ಓದಿನಿಂದ ದಕ್ಕಿದ ಜ್ಞಾನವನ್ನು ಸೋಸಿ ಎಳೆಯರಿಂದ ಹಿಡಿದು ಎಲ್ಲ ವಯೋಮಾನದವರನ್ನೂ ದಾಟಿಸುವ ಓಘದಲ್ಲಿ ಮಾತಾಡುವ ಹಿರಿಯರಾದ ಕವಿ ಹೃದಯದ ಸಮಾಜವಾದಿಯ ಜಿ. ರಾಜಶೇಖರರ ಮಾತು ನಮ್ಮ ಬದುಕನ್ನು ಮತ್ತು ಸುತ್ತಣ ಸಮಾಜವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಅತ್ಯಂತ ಅವಶ್ಯಕ .
ಬರ್ಟೋಲ್ಟ್ ಬ್ರೆಕ್ಟ್
ಕನ್ನಡ ರಂಗಭೂಮಿಗೆ ಶೇಕ್ಸ್‍ಪಿಯರ್‍ನಷ್ಟೇ ಪರಿಚಿತನಾಗಿರುವ ಇನ್ನೊಬ್ಬ ನಾಟಕಕಾರ ಬ್ರೆಕ್ಟ್. ಸಾಹಿತ್ಯದ ಕೆಲಸವು ಸಮಾಜಕ್ಕೆ ಕನ್ನಡಿ ಹಿಡಿಯುವುದಷ್ಟೇ ಅಲ್ಲ ಸಮಾಜವನ್ನು ತಿದ್ದುವುದೇ ಆಗಿದೆ ಎಂದವನು ಬ್ರೆಕ್ಟ್. ಸೊಕ್ರೆಟಿಸ್, ಕೊಪರ್ನಿಕಸ್, ಸಿದ್ಧಾರ್ಥಬುದ್ಧರಂತೆ ಪ್ರಶ್ನೆಗಳನ್ನು ಕೇಳಬೇಕೆಂದವನು. ಕೇಳಿಯೇ ತೀರಿದವನು. `ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ..' ಎಂದ ಬ್ರೆಕ್ಟ್. ಪ್ರಶ್ನೆ ಎನ್ನುವುದು ಒಂದು ಆಯುಧ ಎಂದು ತಿಳಿದ. ತನ್ನ ನಾಟಕ, ಕವಿತೆಗಳ ಮೂಲಕ ಪ್ರಶ್ನೆಗಳನ್ನು ಕೇಳುತ್ತಾ ಚರಿತ್ರೆಯ ಮಹಾನ್ ಪ್ರಶ್ನÀಕಾರರಲ್ಲಿ ಒಬ್ಬನಾದವನು. ಪ್ರಶ್ನೆ ಮಾಡುವುದರಿಂದ ಸರ್ವಾಧಿಕಾರಿಯನ್ನೂ ಅಲುಗಿಸಬಹುದು ಎಂದು ತಿಳಿದ ಬ್ರೆಕ್ಟ್ ಪ್ರಶ್ನಿಸುತ್ತಲೇ ಹೋದ. ಮಾತ್ರವಲ್ಲ, ಪ್ರಶ್ನಿಸುವಂತೆಯೂ ಪ್ರೇರೇಪಿಸಿದ. ಆತನ ಸರಿಸುಮಾರು 45 ನಾಟಕಗಳು, ಕೈಗೆ ಸಿಕ್ಕಿರುವ ಸಾವಿರಕ್ಕೂ ಹೆಚ್ಚು ಕವಿತೆಗಳು, ನೂರಾರು ರಂಗ ಗೀತೆಗಳು ಸುತ್ತಿಗೆಯಂತೆ ಕೆಲಸ ಮಾಡುತ್ತದೆ.
ವೈದ್ಯಕೀಯ ಶಿಕ್ಷಣ ಪಡೆದ ಬ್ರೆಕ್ಟ್ ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಸೇನಾ ಶಿಬಿರಗಳಲ್ಲಿ ಕೆಲಸ ಮಾಡಬೇಕಾಯಿತು. ಕಣ್ಣೆದುರಿಗೆ ಕಂಡ ಧಾರುಣ ದೃಶ್ಯಗಳು ಬ್ರೆಕ್ಟ್ ನೊಳಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಯುದ್ಧ ಮುಗಿದ ನಂತರ ಕಂಡಿದ್ದು ಬದುಕಿನಲ್ಲಿ ಅಂಧಕಾರ ತುಂಬಿದವರನ್ನು. ದೇಶಕ್ಕೆ ದೇಶವೇ ನಿರಾಶ್ರಿತರ ಶಿಬಿರದಂತೆ ಆಗಿತ್ತು. ಹಿಟ್ಲರ್ ಘರ್ಜಿಸತೊಡಗಿದ, ನಾಜಿ ಪಡೆ ಆರ್ಭಟಿಸತೊಡಗಿತು. ಬ್ರೆಕ್ಟ್ ಗೆ ಅನಿಸಿಹೋಯಿತು- ನಾನು ಬರೆದು ಸಮಾಜ ಹೀಗಿದೆ ಎಂದು ಸಾರುತ್ತ ಹೋದರಷ್ಟೇ ಸಾಲುವುದಿಲ್ಲ ಸಮಾಜವನ್ನು ರಿಪೇರಿಯೂ ಮಾಡಬೇಕು . ತತ್ವಜ್ಞಾನಿಗು ಜಗತ್ತನ್ನು ವಿವರಿಸಿದ್ದಾರಷ್ಟೇ ಸದ್ಯದ ತುರ್ತೆಂದರೆ ಜಗತ್ತನ್ನು ಬದಲಿಸುವುದು ಎಂಬ ಮಾಕ್ರ್ಸ್‍ನ ಮಾತುಗಳು ಬ್ರೆಕ್ಟ್‍ಗೆ ಪ್ರೇರಣೆಯಂತಿದೆ. ಸಮಾಜದ ನೋವಿನೊಳಗೆ ಕಳೆದು ಹೋಗಿಬಿಡುವುದಲ್ಲ, ಆ ನೋವನ್ನು ಅರಿತು ಅದನ್ನು ಬದಲಿಸುವುದು ಮುಖ್ಯ ಎಂದು ಕಂಡುಕೊಂಡ ಕಾರಣಕ್ಕಾಗಿಯೇ `ಎಪಿಕ್ ರಂಗ' ಶೈಲಿ ಸಹಾ ಕುಡಿಯೊಡೆಯಿತು. ಕಕೇಶಿಯನ್ ಚಾಕ್ ಸರ್ಕಲ್, ಥ್ರೀ ಪೆನ್ನಿ ಅಪೇರಾ, ಮದರ್ ಕರೇಜ್, ಗೆಲಿಲಿಯೋ ಹೀಗೆ ಸಾಲು ಸಾಲು ನಾಟಕಗಳು ಬ್ರೆಕ್ಟ್‍ನ ಕಾಣ್ಕೆಯನ್ನು ಸ್ಪಷ್ಟಪಡಿಸಿದವು. ಜರ್ಮನಿಯ ಬವೇರಿಯಾ ಪ್ರಾಂತ್ಯದಿಂದ ಹೊರಟ ಬ್ರೆಕ್ಟ್‍ನ ಬದುಕಿನ ಯಾತ್ರೆ ಕೊನೆಗೆ ದೇಶಭ್ರಷ್ಟನ ಹಣೆಪಟ್ಟಿ ಹೊತ್ತು ದೇಶ ದೇಶ ಅಲೆಯುವಂತೆ ಮಾಡಿತು. ಆ ನಂತರ ಅಮೆರಿಕಾದಲ್ಲೂ ಆತ ವಿಚಾರಣೆಯನ್ನು ಎದುರಿಸಬೇಕಾಗಿ ಬಂತು, ಆದರೆ ಬ್ರೆಕ್ಟ್ ಎಲ್ಲೆಡೆಯೂ ಬರೆದ, ಎಲ್ಲೆಡೆಯೂ ನಾಟಕ ಆಡಿಸಿದ, ಎಲ್ಲೆಡೆಯೂ ಪ್ರಶ್ನೆಗಳನ್ನು ಕೇಳಿದ. ಆದರೆ, ಯಾರಿಗೂ ಪ್ರಶ್ನೆಯಾಗಲಿಲ್ಲ.
Subscribe to:
Posts (Atom)





